ಯಡಿಯೂರಪ್ಪಗೆ ರಾಮಲಿಂಗಾರೆಡ್ಡಿ ಸವಾಲ್..!

Ramalinga reddy challenged yeddyurappa...!

11-12-2017 339

ಬೆಂಗಳೂರು: ರವಿ ಬೆಳಗೆರೆ ಪೊಲೀಸ್ ಜೀಪ್ ನಲ್ಲಿ ಸಿಗರೇಟು ಸೇದುವ ಮತ್ತು ಸಿಗರೇಟಿಗೆ ಹಠ ಹಿಡಿದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು, ಪ್ರತಿಕ್ರಿಯಿಸಿದ್ದಾರೆ. ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ರವಿ ಬೆಳಗೆರೆ ಪೊಲೀಸ್ ಜೀಪ್ ನಲ್ಲಿ ಸಿಗರೇಟು ಸೇದುವ ವಿಚಾರದ ವರದಿಯನ್ನು ಟಿವಿಗಳಲ್ಲಿ ನಾನೂ ಗಮನಿಸಿದ್ದೇನೆ, ಆರೋಪಿಗಳಿಗೆ ಹೀಗೆ ಮಾಡಲು ಅವಕಾಶ ಇಲ್ಲ, ಈ ವಿಚಾರದ ಬಗ್ಗೆ ಪೊಲೀಸರ ಜೊತೆ ಚರ್ಚಿಸುತ್ತೇನೆ ಎಂದಿದ್ದಾರೆ.

ಇನ್ನು ಸಿಸಿಬಿ ಕಸ್ಟಡಿಯಲ್ಲಿ ಇರುವಾಗಲೇ ರವಿ ಬೆಳಗೆರೆ ಸುನಿಲ್ ಹೆಗ್ಗರಹಳ್ಳಿ ಅವರಿಗೆ ಕರೆ ಮಾಡಿದ ವಿಚಾರದ ಕುರಿತು, ಈ ಬಗ್ಗೆ ಆಯುಕ್ತರಿಂದ ವರದಿ ಕೇಳಿದ್ದೇನೆ, ಒಂದು ವೇಳೆ ಕರೆ ಮಾಡಿದ್ದರೆ ಅದು ತಪ್ಪು, ಯಾರ ಮೊಬೈಲ್‌ನಿಂದ ಕರೆ ಮಾಡಿದ್ದಾರೋ ಆ ಬಗ್ಗೆಯೂ ವಿವರಣೆ ಕೇಳಿದ್ದೇನೆ ಎಂದರು.  ಅವರ ಆರೋಗ್ಯ ನೋಡಿಕೊಂಡು ಜಾಮೀನು ಕೊಡುವುದು ಬಿಡುವುದು ನ್ಯಾಯಾಲಯಕ್ಕೆ ಬಿಟ್ಟಿದ್ದು ಎಂದು ಹೇಳಿದರು.

ಯಾರ ಕಾಲದಲ್ಲಿ ಏನು ಆಗಿದೆ ಎಂದು ಚರ್ಚೆಗೆ ನಾನು ಸಿದ್ಧ ಎಂದು, ಯಡಿಯೂರಪ್ಪ ಮತ್ತು ಆರ್.ಆಶೋಕ್ ಗೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ಸವಾಲು ಹಾಕಿದ್ದಾರೆ. ಗೌರಿ ಹತ್ಯೆ ಕೇಸ್ ದಿಕ್ಕು ತಪ್ಪಿಸಲು ರವಿ ಬೆಳಗೆರೆಯನ್ನು ಬಂಧಿಸಲಾಗಿದೆ ಎಂಬ, ಬಿಜೆಪಿ ಆರೋಪದಲ್ಲಿ ಹುರುಳಿಲ್ಲ ಎಂದರು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ