ಬದುಕಿದ್ದಾಗಲೇ ತಾಯಿ ಸಮಾಧಿಗೆ ಸಿದ್ಧತೆ..!

11-12-2017
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲೊಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ತಾಯಿ ಬದುಕಿರುವಾಗಲೇ ಮಕ್ಕಳು ಸಮಾಧಿಗೆ ಸಿದ್ಧತೆ ಮಾಡಿರುವುದು ತಿಳಿದು ಬಂದಿದೆ. ಬಾಗಲಕೋಟೆಯ ಹುನಗುಂದ ತಾಲ್ಲೂಕಿನ ಉಪನಾಳದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಪಾರ್ವತೆವ್ವ ಹಿರೇಮಠ (106) ಎಂಬ ವೃದ್ಧೆ, ನಾಲ್ವತ್ತು ದಿನಗಳಿಂದ ಅನ್ನ, ನೀರು ಇಲ್ಲದೇ ಹಾಸಿಗೆ ಹಿಡಿದಿದ್ದು, ಇಂದಿಲ್ಲ ನಾಳೆ ತಾಯಿ ಸಾಯಬಹುದು ಅಂತ ಮೊದಲೇ ಸಮಾಧಿಗೆ ಸಿದ್ಧತೆ ಮಾಡಿದ್ದಾರೆ. ಶಂಕರಯ್ಯ, ವರದಯ್ಯ, ಕಲ್ಲವ್ವ, ಎಂಬ ಮಕ್ಕಳು ಈ ಕೃತ್ಯ ಎಸಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿರೋ ವೃದ್ಧೆ, ಸ್ಪಷ್ಟವಾಗಿ ಉಸಿರಾಡುತ್ತಿದ್ದು ಚಲನವಲನದಿದಂದಿದ್ದಾರೆ. ಆದರೆ ಮಕ್ಕಳ ಕೃತ್ಯ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಮಕ್ಕಳ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಒಂದು ಕಮೆಂಟನ್ನು ಹಾಕಿ