ಟಾಯ್ಲೆಟ್‌ಗೂ ಆಧಾರ್ ನಂಬರ್..!

Now Urban Public Toilets To Get Unique IDs

11-12-2017

ಆಧಾರ್ ಅಥವ ವಿಶಿಷ್ಟ ಗುರುತಿನ ಸಂಖ್ಯೆ ಅನ್ನುವುದು ಅದೇನು ಸಂಚಲನ ಸೃಷ್ಟಿಸಿದೆಯೋ ಗೊತ್ತಿಲ್ಲ, ದೇಶದಲ್ಲಿ ಎಲ್ಲೆಡೆ ಆಧಾರ್, ಎಲ್ಲದಕ್ಕೂ ಆಧಾರ್,  ಆಧಾರ್ ಇರದೇ ಇರುವುದೆಲ್ಲಾ ನಿರಾಧಾರ್ ಅನ್ನುವಂತಾಗುತ್ತಿದೆ. ಇದೀಗ ಟಾಯ್ಲೆಟ್‌ಗಳ ಸರದಿ. ಹೌದು, ನಗರ ಪ್ರದೇಶಗಳಲ್ಲಿರುವ ಎಲ್ಲ ಸಾರ್ವಜನಿಕ ಶೌಚಾಲಯಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡಲಾಗುತ್ತದಂತೆ. ಈ ಸಂಖ್ಯೆಯನ್ನು ಎಲ್ಲ ಟಾಯ್ಲೆಟ್‌ಗಳ ಪ್ರವೇಶ ದ್ವಾರದಲ್ಲಿ ದೊಡ್ಡದಾಗಿ ಪ್ರದರ್ಶಿಸಬೇಕು. ಇದರ ಜೊತೆಗೆ, ಆ ಟಾಯ್ಲೆಟ್, ಯಾವ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿದೆ, ಅದನ್ನು ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರನ ಹೆಸರು ಮತ್ತು ಫೋನ್ ನಂಬರ್ ಬರೆದಿರಬೇಕು. ಆ ಟಾಯ್ಲೆಟ್ ಸ್ವಚ್ಛವಾಗಿಲ್ಲದಿದ್ದರೆ ಯಾರಿಗೆ ದೂರು ನೀಡಬೇಕು ಎಂಬುದನ್ನೂ ಬರೆದಿರಬೇಕು ಎಂದು ಸೂಚಿಸಲಾಗಿದೆ.

ನಗರ ಪ್ರದೇಶದಲ್ಲಿನ ಶೌಚಾಲಯಗಳ ನಿರ್ವಹಣೆ ವಿಚಾರವನ್ನು ಸ್ವಚ್ಛಭಾರತ ಯೋಜನೆ ಅಡಿಯಲ್ಲಿ ತರಲು ನಿರ್ಥರಿಸಲಾಗಿದೆ. ಸ್ವಚ್ಛಭಾರತ ಯೋಜನೆ ಅಡಿ ಈಗಾಗಲೇ 2.34 ಲಕ್ಷ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಇವುಗಳು ಸ್ವಚ್ಛವಾಗಿದ್ದಲ್ಲಿ, ಆ ಪ್ರದೇಶದಲ್ಲಿನ ಜನರು ಶೌಚಕ್ಕಾಗಿ ಬಯಲಿಗೆ ಹೋಗುವುದನ್ನು ತಪ್ಪಿಸಬಹುದು ಎಂಬ ಆಶಯ ಸರ್ಕಾರದ್ದಾಗಿದೆ.


ಸಂಬಂಧಿತ ಟ್ಯಾಗ್ಗಳು

Aadhaar toilet ವಿಶಿಷ್ಟ ಸಂಖ್ಯೆ ಫೋನ್ ನಂಬರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ