ದೇವಸ್ಥಾನ ಉಳಿವಿಗಾಗಿ ಸಂಡೂರು ಬಂದ್

Bellary

11-12-2017

ಬಳ್ಳಾರಿ: ಬಳ್ಳಾರಿಯಲ್ಲಿನ ಐತಿಹಾಸಿಕ ಕುಮಾರಸ್ವಾಮಿ ದೇವಸ್ಥಾನದ ಉಳಿವಿಗಾಗಿ ಸಂಡೂರು ಪಟ್ಟಣದ, ಕುಮಾರಸ್ವಾಮಿ ದೇವಸ್ಥಾನ ಉಳಿಸಿ ಹೋರಾಟ ಸಮಿತಿಯಿಂದ ಬಂದ್ ಗೆ ಕರೆ ನೀಡಲಾಗಿದ್ದು, ಅಂಗಡಿ ಮುಂಗಟ್ಟು, ಸ್ವಯಂ ಘೋಷಿತ ಬಂದ್ ಚರಿಸುತ್ತಿವೆ. ಇನ್ನು ಸಂಡೂರು ಪಟ್ಟಣದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪ್ರತಿಭಟನಾಕಾರರು, ಸಂಡೂರಿನಿಂದ ಕುಮಾರಸ್ವಾಮಿ ದೇವಸ್ಥಾನಕ್ಕೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.

ಸಂಡೂರಿನ ಕುಮಾರಸ್ವಾಮಿ ದೇವಸ್ಥಾನವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವನ್ನಾಗಿ ಘೋಷಿಸುವಂತೆಯು, ಸುತ್ತಲಿನ 2 ಕಿ.ಮೀ ವ್ಯಾಪ್ತಿಯ ಕುಮಾರಸ್ವಾಮಿ ಬೆಟ್ಟವನ್ನು ಪರಿಸರ ಸೂಕ್ಷ್ಮ ವಲಯವೆಂದು ಗುರುತಿಸಲು ಒತ್ತಾಯಿಸಿದ್ದಾರೆ. ಅದಲ್ಲದೇ ದೇವಸ್ಥಾನ ಸುತ್ತಮುತ್ತಲಿನಲ್ಲಿ ಗಣಿಗಾರಿಕೆ ಮಾಡದಂತೆ ಅಗ್ರಹಿದ್ದಾರೆ. ಈ ಹಿಂದೆಯೂ ಹೋರಾಟ ಸಮಿತಿಯು ದೇವಸ್ಥಾನ ಉಳಿವಿಗಾಗಿ ಸಾಕಷ್ಟು ಪ್ರತಿಭಟನೆಗಳನ್ನು ನಡೆಸಿತ್ತು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ