ಯುವಕನ ಮೇಲೆ ಚಿರತೆ ದಾಳಿ

Leopard attack on young boy

09-12-2017

ಬಳ್ಳಾರಿ: ಯುವಕನ ಮೇಲೆ ಚಿರತೆ ದಾಳಿ ಮಾಡಿರುವ ಘಟನೆಯು, ಬಳ್ಳಾರಿಯ ಸಂಡೂರು ತಾಲ್ಲೂಕಿನ ಸುಶೀಲಾನಗರದಲ್ಲಿ ನಡೆದಿದೆ. ಶಿವಕುಮಾರ್ ಎನ್ನುವ ಯುವಕನ ಮೇಲೆ ಚಿರತೆ ದಾಳಿಮಾಡಿ, ಬೆನ್ನಿಗೆ ಪರಚಿ ಗಾಯಗೊಳಿಸಿದೆ. ತನ್ನ ಜಮೀನಿನಲ್ಲಿ ಟ್ರ್ಯಾಕ್ಟರ್ ನಿಂದ ಕೆಲಸ ಮಾಡುತ್ತಿದ್ದ ವೇಳೆ, ಹಿಂದಿನಿಂದ ಬಂದು ದಾಳಿ ಮಾಡಿದೆ. ಚಿರತರ ಮೈ ಮೇಲೆ ಎರಗಿದ ತಕ್ಷಣ ಭಯದಿಂದ ಯುವಕ ಕೂಗಿಕೊಂಡಿದ್ದಾನೆ, ಈ ವೇಳೆ ಅಲ್ಲೇ ಇದ್ದ ಮತ್ತಿಬ್ಬರು ಯುವನನ್ನು ರಕ್ಷಿಸಿದ್ದಾರೆ. ಯುವಕ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.


ಸಂಬಂಧಿತ ಟ್ಯಾಗ್ಗಳು

leapord bellary ಟ್ರ್ಯಾಕ್ಟರ್ ಸಂಡೂರು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ