ಅಕ್ರಮ ಸಂಬಂಧ ಮತ್ತು ಕೊಲೆ

Illegal relationship and murder

09-12-2017

ಮೈಸೂರು: ಅಕ್ರಮ ಸಂಬಂಧ ಹಿನ್ನೆಲೆ, ಗೃಹಿಣಿಯೊಬ್ಬರನ್ನು ಕೊಲೆ ಮಾಡಿರುವ ದಾರುಣ ಘಟನೆಯು ಮೈಸೂರಿನಲ್ಲಿ ನಡೆದಿದೆ. ಅಕ್ರಮ ಸಂಬಂಧ ಹೊಂದಿದ್ದ ಪ್ರಿಯಕರನೇ ಈ ಕೃತ್ಯ ಎಸಗಿದ್ದಾನೆ. ನಗರದ ಮಾರುತಿ ಬಡಾವಣೆ ನಿವಾಸಿ ಜ್ಯೋತಿ (29) ಕೊಲೆಯಾದವರು. ಹುಣಸೂರು ಪಟ್ಟಣದ ಪ್ರವೀಣ್ ಕೊಲೆ ಆರೋಪಿ. ಮೊದಲೇ ಮದುವೆಯಾಗಿದ್ದ ಜ್ಯೋತಿಗೆ ಮೂವರು ಮಕ್ಕಳಿದ್ದಾರೆ. ಇದರ ನಡುವೆ ಒಂದು ವರ್ಷದಿಂದ ಜ್ಯೋತಿ ಮತ್ತು ಪ್ರವೀಣ್ ನಡುವೆ ಅಕ್ರಮ ಸಂಬಂಧ ಬೆಳೆದಿತ್ತು. ಇನ್ನು ನಿನ್ನೆ ರಾತ್ರಿ ಜ್ಯೋತಿ, ಪ್ರವೀಣ್ ಮನೆಗೆ ಹೋಗಿ ಜಗಳವಾಡಿದ್ದಳು. ಇದರಿಂದ ಕುಪಿತನಾಗಿದ್ದ ಪ್ರವೀಣ್, ಇಂದು ಬೆಳಿಗ್ಗೆ ಜ್ಯೋತಿ ಮನೆಗೆ ನುಗ್ಗಿ ಕತ್ತಿಗೆ ಹಗ್ಗ ಬಿಗಿದು ಕೊಲೆಗೈದಿದ್ದಾನೆ.

ಕೊಲೆ ನಂತರ, ಬೈಪಾಸ್ ರಸ್ತೆಯ ಪ್ರಶಾಂತ್ ಲಾಡ್ಜ್ ನ ಮೇಲಿನ ಮಹಡಿಗೆ ಹೋಗಿ ತನ್ನ ತಂದೆಗೆ ಫೋನಾಯಿಸಿದ್ದು, ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ. ಕೂಡಲೇ ಸ್ಥಳಕ್ಕೆ ಆಗಮಿಸಿದ ಆರೋಪಿ ತಂದೆ, ಪುತ್ರನ ಮನವೊಲಿಸಿದ್ದಾರೆ. ಡಿವೈಎಸ್ಪಿ ಭಾಸ್ಕರ, ಸರ್ಕಲ್ ಇನ್ಸ್ ಪೆಕ್ಟರ್ ಪೂವಯ್ಯ, ಪಿಎಸ್ಐ ಷಣ್ಮುಗಂ  ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹುಣಸೂರು ಪಟ್ಟಣ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

Illegal relationship Murder ಪಿಎಸ್ಐ ಪ್ರಿಯಕರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ