'ಗುಜರಾತ್ ನಲ್ಲಿ ಬಿಜೆಪಿ ಸೋಲುತ್ತದೆ'- ಸಿದ್ದು09-12-2017

ಮೈಸೂರು: ಪತ್ರಕರ್ತ ರವಿ ಬೆಳಗೆರೆ ಬಂಧನ‌ ವಿಚಾರಕ್ಕೆ ಸಂಬಂಧಿಸಿದಂತೆ, ಸಿಎಂ ಸಿದ್ದರಾಮ್ಯನವರು, ಬಂಧನದ ಬಗ್ಗೆ ನನಗೆ ಏನೂ ಗೊತ್ತಿಲ್ಲ, ಆದರೆ ಯಾರೇ ತಪ್ಪು ಮಾಡಿದರೂ, ಪೊಲೀಸರು ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದರು.

ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ವರುಣಾ ಬಿಟ್ಟು ಚಾಮುಂಡೇಶ್ವರಿ ನಿಲ್ಲುತ್ತಾರೆ ಎಂದ ಸದಾನಂದಗೌಡ ಹೇಳಿಕೆಗೆ, ಅಷ್ಟು ಕಾನ್ಫಿಡೆನ್ಸ್ ಇದ್ದರೆ, ಸದಾನಂದ ಗೌಡರೇ ಬಂದು ವರುಣಾದಲ್ಲಿ ಸ್ಪರ್ಧೆ ಮಾಡಲಿ, ಬಿಜೆಪಿಯವರಿಗೆ ಅದು ಸಾಧ್ಯವಾ ಎಂದು ಬಹಿರಂಗ ಸವಾಲು ಹಾಕಿದ್ದಾರೆ. ಸದಾನಂದ ಗೌಡರಿಗೂ ವರುಣಾ ಕ್ಷೇತ್ರಕ್ಕೂ ಸಂಬಂಧವಿಲ್ಲ, ಕೇವಲ ಒಂದು ದಿನ ಪ್ರವಾಸ ಮಾಡಿದಾ ಕ್ಷಣ ಜನರ ನಾಡಿ ಮಿಡಿತ ಅರ್ಥವಾಗೊದಿಲ್ಲ, ಇದೆಲ್ಲ ಅವರು ಕೇವಲ ರಾಜಕೀಯಕ್ಕಾಗಿ ಮಾತನಾಡುತ್ತಾರೆ ಎಂದರು.

ಇನ್ನು ಗುಜರಾತ್ ಚುನಾವಣೆ ವಿಚಾರವಾಗಿ ಮಾತನಾಡಿ, ಈಗಷ್ಟೇ ಮೊದಲ ಹಂತದ ಚುನಾವಣೆ ಆಗಿದೆ. ನಾನು ಮತದಾರರ ಮನಸ್ಥಿತಿ ಅರ್ಥ ಮಾಡಿಕೊಳ್ಳು ಆಗಲ್ಲ, ನಾನೂ ಕೂಡ ಗುಜರಾತ್ ನಲ್ಲಿ ಪ್ರವಾಸ ಮಾಡಿಲ್ಲ, ಆದರೂ ನನಗಿರುವ ಮಾಹಿತಿ ಪ್ರಕಾರ ಗುಜರಾತ್ ನಲ್ಲಿ ಬಿಜೆಪಿ ಸೋಲುತ್ತದೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ