ಮಿಸ್ ಕಾಲ್ ಮತ್ತು ಜೆಡಿಎಸ್ ಸುದ್ದಿ...!

Miss Call and JDS News

09-12-2017

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಸಾಕಷ್ಟು ಪ್ರಸಿದ್ಧರಾಗಿರುವ ಮಾಜಿ ಮುಖ್ಯಮಂತ್ರಿ ಹಾಗು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು, ಈಗ ಇನ್ನೊಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಪ್ರತಿ ದಿನ ಹೆಚ್.ಡಿ.ಕುಮಾರಸ್ವಾಮಿ ಅವರ ಸುದ್ದಿಯನ್ನು ಮೊಬೈಲ್ ಮೂಲಕ ಪಡೆಯುವ ಯೋಜನೆಗೆ ಅವರ ತಾಂತ್ರಿಕ ಸಲಹೆಗಾರರು ಯೋಜನೆ ಸಿದ್ಧಪಡಿಸಿದ್ದಾರೆ. 'ನಮ್ಮ ಹೆಚ್ಡಿಕೆ' ಜಾಲತಾಣ ಈಗಾಗಲೇ ಫೇಸ್ ಬುಕ್, ಟ್ಟೀಟರ್, ಯು-ಟ್ಯೂಬ್, ಸೌಂಡ್ ಕ್ಲೌಡ್ ನಲ್ಲಿ ಜನಪ್ರಿಯವಾಗಿದ್ದು, ಈಗ ಅದರ ಮುಂದುವರಿಕೆಯಾಗಿ ಮೊಬೈಲ್ ಸೇವೆ ಆರಂಭಿಸಲಿದೆ.

ಅವರು  ನೀಡಿರುವ ಮೊಬೈಲ್ ಸಂಖ್ಯೆಗೆ ಒಂದು ಮಿಸ್ ಕಾಲ್ ಕೊಟ್ಟರೆ ಸಾಕು, ಆ ಸಂಖ್ಯೆ 'ನಮ್ಮ ಹೆಚ್ಡಿಕೆ' ಸಾಮಾಜಿಕ ಜಾಲತಾಣದಲ್ಲಿ ನೊಂದಾಯಿಸಲ್ಪಡುತ್ತದೆ. ಆ ನಂತರ ಪ್ರತೀ ದಿನ ಮೂರು ಬಾರಿ, ಕುಮಾರಸ್ವಾಮಿ ಅವರ ಸಭೆ ಸಮಾರಂಭ, ಭಾಷಣ, ಪತ್ರಿಕಾ ಗೋಷ್ಟಿ ಎಲ್ಲವೂ ಆ ನಂಬರ್ ನ ಮಾಲೀಕರಿಗೆ ಸಿಗುತ್ತದೆ. ಕೇವಲ ಸುದ್ದಿಗಳಷ್ಟೇ ಅಲ್ಲದೆ ಆಡಿಯೋ, ವೀಡಿಯೊಗಳನ್ನೂ ಕಳುಹಿಸಲಾಗುತ್ತದೆ. ಪ್ರತಿ ದಿನ ಬೆಳಿಗ್ಗೆ ಕುಮಾರ ಸ್ವಾಮಿ ಅವರ, ಕಾರ್ಯಕ್ರಮದ ವಿವರ ನೀಡುವ ಮೂಲಕ ಆರಂಭವಾಗುವ ಈ ಸುದ್ದಿ ಸೇವೆ, ದಿನದ ಅಂತ್ಯಕ್ಕೆ ರೌಂಡ್ ಅಪ್ ನೀಡುವ ಮೂಲಕ ಮುಕ್ತಾಯವಾಗುತ್ತದೆ.

ಅಂತರ್ಜಾಲ ಆಧಾರಿತ ಮಾಧ್ಯಮಗಳು ಈಗ ಪ್ರಬಲವಾಗಿರುವುದರಿಂದ ನಮ್ಮ ವಿಚಾರಗಳನ್ನು ಆ ಮಾಧ್ಯಮದ ಮೂಲಕವೂ ಜನರಿಗೆ ತಲುಪಿಸಲು ಈ ಯೋಜನೆ ಹೊಂದಿದ್ದೇವೆ' ಎಂದು ಕುಮಾರಸ್ವಾಮಿ ಅವರು ತಿಳಿಸಿದರು. 'ಅಮೆರಿಕಾದ ಚುನಾವಣೆಗಳು ಹಾಗೂ ಕಳೆದ ಸಾಲಿನ ಭಾರತದ ಚುನಾವಣೆಗಳಲ್ಲಿ ಸಾಮಾಜಿಕ ಜಾಲತಾಣಗಳು ಎಂತಹ ಮಹತ್ವದ ಪಾತ್ರ ವಹಿಸಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಾಗಾಗಿ ರಾಜ್ಯದ ಹಿತ ಕಾಯಲು ಸಿದ್ಧವಾಗಿರುವ ನಾವು, ಜನರನ್ನು ತಲುಪುವ ಎಲ್ಲಾ ಮಾರ್ಗವನ್ನೂ ಬಳಸುತ್ತೇವೆ' ಎಂದು ತಿಳಿಸಿದರು. ಮಿಸ್ ಕಾಲ್ ಗಳನ್ನೂ ನೋಂದಾಯಿಸುವ ಸೇವೆ ಈ ಭಾನುವಾರದಿಂದ ಆರಂಭವಾಗಲಿದೆ ಎಂದರು.


ಸಂಬಂಧಿತ ಟ್ಯಾಗ್ಗಳು

HD kumaraswamy Social Media 'ಅಮೆರಿಕಾ ಮಿಸ್ ಕಾಲ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ