ಮಾರಕಾಸ್ತ್ರಗಳನ್ನು ಬಿಟ್ಟು ಕಳ್ಳರು ಪರಾರಿ

shop robbery in hiriyur

09-12-2017

ಚಿತ್ರದುರ್ಗ: ಚಿತ್ರದುರ್ಗದ ಹಿರಿಯೂರು ತಾಲ್ಲೂಕಿನಲ್ಲಿ ಕಳ್ಳರು ತಮ್ಮ ಕೈಚಳ ತೋರಿದ್ದಾರೆ. ತಾಲ್ಲೂಕಿನ ಅಂಗಡಿಯೊಂದರ ಹಲಗೆಗಳನ್ನು ಮುರಿದು, ಕಳ್ಳತನ ಮಾಡಿದ್ದಾರೆ. ವಾಣಿವಿಲಾಸ್ ಸಾಗರದ ಬಳಿಯ ಮಾರಿಕಣಿವೆ ದೇವಸ್ಥಾನ ಎದುರಿದ್ದ ಅಂಗಡಿಯಲ್ಲಿ ಕಳ್ಳತನ ಮಾಡಿದ್ದಾರೆ. ಸುಮಾರು 30 ಸಾವಿರ ನಗದು, ಟಿವಿ, ಇನ್ನಿತರೆ ವಸ್ತುಗಳ ದೋಚಿ ಪರಾರಿಯಾಗಿದ್ದಾರೆ. ಅಂಗಡಿಯು ತಿಪ್ಪೇಸ್ವಾಮಿ-ಗಂಗಮ್ಮ ಎಂಬುವವರಿಗೆ ಸೇರಿರುವುದಾಗಿ ತಿಳಿದು ಬಂದಿದೆ. ದೊಣ್ಣೆ, ಮಚ್ಚು, ಮಾರಕಾಸ್ತ್ರಗಳೊಂದಿಗೆ ಬಂದಿರುವ ಗ್ಯಾಂಗ್, ಕಳ್ಳತನದ ನಂತರ ಸ್ಥಳದಲ್ಲೇ ಮಾರಕಾಸ್ತ್ರಗಳನ್ನು ಬಿಟ್ಟು ಕಾಲ್ಕಿತ್ತಿದ್ದಾರೆ. ಇನ್ನು ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಪೊಲೀಸರು ಭೇಟಿ ನೀಟಿ, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ