ಸೋನಿಯಾ ಗಾಂಧಿಗೆ ಕೈ ನಾಯಕರ ಶುಭಹಾರೈಕೆ

birthday wishes to sonia gandhi

09-12-2017 233

ಬೆಂಗಳೂರು: ಇಂದು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಹುಟ್ಟುಹಬ್ಬ ಹಿನ್ನೆಲೆ, ಸಿಎಂ ಸಿದ್ದರಾಮಯ್ಯ ಅವರು, ಕಾಂಗ್ರೆಸ್ ನಾಯಕಿಗೆ ಶುಭ ಕೋರಿದ್ದಾರೆ. ಟ್ವೀಟರ್ ಮೂಲಕ ಶುಭಹಾರೈಸಿದ್ದಾರೆ. ಇನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಸಹ, ಸೋನಿಯಾ ಗಾಂಧಿ ಅವರಿಗೆ ಶುಭ ಕೋರಿದ್ದು, ದೇಶದಲ್ಲಿ ಕಾಂಗ್ರೆಸ್ ಪಕ್ಷ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡುವಲ್ಲಿ ಸೋನಿಯಾಜಿ‌ ದುಡಿದಿದ್ದಾರೆ ಎಂದರು. ಅಲ್ಲದೇ ಸೋನಿಯಾ ಗಾಂಧೀಜಿ ಹುಟ್ಟುಹಬ್ಬದ ಪ್ರಯುಕ್ತ ರಾಜ್ಯ ಮಹಿಳಾ ಘಟಕ ಬೈಕ್ ಜಾಥಾ ಹಮ್ಮಿಕೊಂಡಿದೆ ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷವನ್ನು ಇನ್ನು ಹೆಚ್ಚು ಬಲಗೊಳಿಸಲು ಮಹಿಳಾ ಘಟಕ ಸ್ಥಾಪಿಸಿದ್ದು, ಮಹಿಳೆಯರ ಪ್ರಗತಿಗಾಗಿ ರಾಜ್ಯ ಮಹಿಳಾ ಘಟಕ ದುಡಿಯುತ್ತಿದೆ ಎಂದರು.

ಲಕ್ಷೀ ಹೆಬ್ಬಾಳ್ಕರ್ ಮಾತನಾಡಿ, ಸೋನಿಯಾ ಗಾಂಧಿ ಯವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿ, ಶುಭ ಹಾರೈಸಿದರು. ಸೋನಿಯಾ ಅವರ ಹುಟ್ಟು ಹಬ್ಬ ಪ್ರಯುಕ್ತ ಬೈಕ್ ಜಾಥಾ ಹಮ್ಮಿಕೊಂಡಿದ್ದೇವೆ, ಮಹಿಳೆಯರಿಗೆ ಹಲವು‌ ಉಪಯೋಗಿ‌ ಕಾರ್ಯಕ್ರಮಗಳನ್ನು ಸೋನಿಯಾಜಿ ನೀಡಿದ್ದಾರೆ ಎಂದು ಹೊಗಳಿದರು. ಅಲ್ಲದೇ ಕೆಪಿಸಿಸಿ ಕಚೇರಿಯಿಂದ ಸ್ವಾತಂತ್ರ್ಯ ಉದ್ಯಾನ ವನದವರೆಗೆ  ಜಾಥಾ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ