ಹಸಿಕೋಲು-ವಿದ್ಯುತ್ ತಂತಿ: ಬಾಲಕ ಬಲಿ

electric wire killed A boy

08-12-2017

ಬೆಂಗಳೂರು: ಪರಪ್ಪನ ಅಗ್ರಹಾರದ ನಾಗಮುನೇಶ್ವರ ಲೇಔಟ್ ಬಳಿ ಆಟವಾಡಿಕೊಂಡು ಮನೆಗೆ ಹೋಗುತ್ತಿದ್ದ 9 ವರ್ಷದ ಬಾಲಕ ತ್ರಿಶೂಲ್, ಕೈಯಲ್ಲಿ ಹಿಡಿದಿದ್ದ ಹಸಿಕೋಲು ಹೈಟೆನ್ಷನ್ ವಿದ್ಯುತ್ ತಂತಿಗೆ ತಗುಲಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ತಮಿಳುನಾಡು ಮೂಲದ ಬೆಟ್ಟಯ್ಯ ಎಂಬುವರ ಪುತ್ರ ತ್ರಿಶೂಲ್ ನಾಗಮುನೇಶ್ವರ ಲೇಔಟ್‍ನ ಅಜ್ಜಿ ಮನೆಯಲ್ಲಿದ್ದ ತ್ರಿಶೂಲ್ ಸ್ಥಳೀಯ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದನು. ಕಳೆದ ಡಿಸೆಂಬರ್ 3ರಂದು ಮಧ್ಯಾಹ್ನ ಹತ್ತಿರದ ಸಲೂನ್‍ಗೆ ಹೋಗಿ ಕಟಿಂಗ್ ಮಾಡಿಸಿಕೊಂಡು ಮನೆಗೆ ನಡೆದುಕೊಂಡು ಬರುತ್ತಿದ್ದ ಬಾಲಕ ಉದ್ದದ ಹಸಿಕೋಲು ಹಿಡಿದು ಆಟವಾಡುತ್ತಿದ್ದ, ತುಂತುರು ಮಳೆ ಬೀಳುತ್ತಿದ್ದರಿಂದ ಕೋಲು ಎತ್ತಿದ ಕೂಡಲೇ ಹತ್ತಿರದಲ್ಲೇ ಹಾದು ಹೋಗಿದ್ದ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಕುಸಿದು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಕೂಡಲೇ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಯಿಸಿತಾದರೂ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಮೃತಪಟ್ಟಿದ್ದಾನೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ