ಸಿಎಂ ವಿರುದ್ಧ ದೇವೇಗೌಡರು ಕೆಂಡಾಮಂಡಲ

Deve Gowda angery CM siddaramaiah

08-12-2017

ಚಿಕ್ಕಮಗಳೂರು: ದೇವೇಗೌಡರು ಯಾರ ಪರ ನಿಲುವು ಹೊಂದಿದ್ದಾರೆ, ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ, ಮಾಜಿ ಪ್ರಧಾನಿ ದೇವೇಗೌಡ ಕೆಂಡಮಂಡಲರಾಗಿದ್ದರೆ ಈ ಕುರಿತು ಚಿಕ್ಕಮಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನನ್ನನು ಜಾತಿವಾದಿ ಎಂದು ಬಿಂಬಿಸಿಬಿಟ್ಟಿದ್ದಾರೆ, ನಾನು ಕುರುಬರ, ಅಹಿಂದ ಪರವು ಅಲ್ಲ, ನಾನು ಜನರ ಪರ, ಮೊದಲು ದೇವೇಗೌಡ ಏನು ಎಂದು ತಿಳಿದುಕೊಳ್ಳಲಿ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

ವಾಟ್ ಈಸ್ ದೇವೇಗೌಡ ಎಂದು ಮುಂದೆ ನಡೆಯುವ ಫೈಟಿಂಗ್ ಇಂದ ಗೊತ್ತಾಗುತ್ತೆ. ದೇವೇಗೌಡರು ನಿನ್ನೆ ಸಿಎಂ ಭ್ರಷ್ಟಾಚಾರ ಮುಕ್ತ ಆಡಳಿತದ ಬಗ್ಗೆ ನೀಡಿರುವ ಹೇಳಿಕೆ, ಕುರಿತು ಇಂದು ಮೈಸೂರಿನಲ್ಲಿ ಸಿಎಂ, ಯಾರ ಪರ ದೇವಗೌಡರ ನಿಲುವು ಎಂದು ಪ್ರಶ್ನಿಸಿದ್ದಾರೆ, ನನ್ನ ಹೇಳಿಕೆಯನ್ನು ತಿರುಚಿಲಾಗಿದೆ. ಕೆಸಿ ರೆಡ್ಡಿಯಿಂದ ಇಲ್ಲಿವರೆಗೂ ಆಗಿದ್ದ ಸಿಎಂ ಎಲ್ಲರೂ ಭ್ರಷ್ಟರೆ, 'ಸಿಎಂ ಸಿದ್ದರಾಮಯ್ಯ ಮಾತ್ರ ಉತ್ತಮ' ಹಾಗಾದ್ರೆ ಈ ಹಿಂದೆ ಅಧಿಕಾರ ನಡೆಸಿದ ನಾವೆಲ್ಲ ಭ್ರಷ್ಟರೆ ಎಂದು ದೇವೇಗೌಡರು ವ್ಯಂಗವಾಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

HDD CM siddaramaiah ಕುರುಬ ಅಹಿಂದ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ