ವ್ಯಕ್ತಿ ಪ್ರಾಣ ತೆಗೆದ ಅಪಹಾಸ್ಯ...!

A man hang suicide in bangalore

08-12-2017

ಬೆಂಗಳೂರು: ಬಸವೇಶ್ವರನಗರದ ಬೋವಿಕಾಲೋನಿಯಲ್ಲಿ, ಒಳಾಂಗಣ ವಿನ್ಯಾಸಕಾರನಾಗಿದ್ದ ಯುವಕನೊಬ್ಬ ಪತ್ನಿಯ ಮನೆಯವರು ಮಾಡುತ್ತಿದ್ದ ಅಪಹಾಸ್ಯಕ್ಕೆ ನೊಂದು ನೇಣಿಗೆ ಶರಣಾಗಿರುವ ದುರ್ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಬೋವಿ ಕಾಲೋನಿಯ 2ನೇ ಬ್ಲಾಕ್‍ನ ಕಾರ್ತಿಕ್ (29)ಎಂದು ಗುರುತಿಸಲಾಗಿದೆ. ಒಳಾಂಗಣ ವಿನ್ಯಾಸಕಾರನಾಗಿದ್ದ ತಮಿಳುನಾಡು ಮೂಲದ ಕಾರ್ತಿಕ್, ಐದು ವರ್ಷಗಳ ಹಿಂದೆ ನಗರದ ಯುವತಿ ರಮ್ಯಾ ಎನ್ನುವರನ್ನು ಪ್ರೀತಿಸಿ ವಿವಾಹವಾಗಿದ್ದ.

ವಿವಾಹಕ್ಕೂ ಮುನ್ನ ಪತ್ನಿಯ ಮನೆಯವರಿಗೆ ನಾನು ಶ್ರೀಮಂತ, ತಮಿಳುನಾಡಿನಲ್ಲಿ ನನಗೆ ಬೇಕಾದಷ್ಟು ಆಸ್ತಿ ಇದೆ ಎಂದು ಹೇಳಿಕೊಂಡಿದ್ದ. ದಿನ ಕಳೆದಂತೆ ಕಾರ್ತಿಕ್‍ಗೆ ಯಾವುದೇ ಆಸ್ತಿ ಇಲ್ಲದೆ ಬಡವ ಎಂದು ತಿಳಿದು ಅಪಹಾಸ್ಯ ಮಾಡುತ್ತಿದ್ದರು.

ಇದಲ್ಲದೆ ರಮ್ಯಾ ಅವರನ್ನು ಬಟ್ಟೆ ಅಂಗಡಿಗೆ ಕೆಲಸಕ್ಕೆ ಕಳುಹಿಸುತ್ತಿದ್ದ. ಪ್ರತಿ ದಿನ ಬೆಳಿಗ್ಗೆ ಪತ್ನಿಯನ್ನು ಕೆಲಸಕ್ಕೆ ಬಿಟ್ಟು ರಾತ್ರಿ ವಾಪಸ್ಸು ಕರೆದುಕೊಂಡು ಬರುತ್ತಿದ್ದ. ನಿನ್ನೆ ಬೆಳಿಗ್ಗೆ ಪತ್ನಿಯನ್ನು ಕೆಲಸಕ್ಕೆ ಬಿಟ್ಟವನು ರಾತ್ರಿ ಎಷ್ಟು ಹೊತ್ತಾದರೂ ಕರೆದುಕೊಂಡು ಬರಲು ಹೋಗಿರಲಿಲ್ಲ. ಮೊಬೈಲ್ ಕರೆ ಮಾಡಿದರೂ ಸ್ವೀಕರಿಸದಿದ್ದರಿಂದ ಆತಂಕಗೊಂಡ ರಮ್ಯಾ ಮನೆಗೆ ಬಂದು ನೋಡಿದಾಗ ಕಾರ್ತಿಕ್ ನೇಣಿಗೆ ಶರಣಾಗಿದ್ದರು. ಪ್ರಕರಣ ದಾಖಲಿಸಿರುವ ಬಸವೇಶ್ವರ ನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

crime News Suicide ಬಟ್ಟೆ ಅಂಗಡಿ ಮೊಬೈಲ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ