ಆಂಬುಲೆನ್ಸ್ ದುರುಪಯೋಗಕ್ಕೆ ಕಡಿವಾಣ..?

Misuse use of ambulance should be regulate

08-12-2017

ಬೆಂಗಳೂರು: ಆಂಬುಲೆನ್ಸ್ ಗಳ ದುರುಪಯೋಗಕ್ಕೆ ಕಡಿವಾಣ ಹಾಕಲು ರಸ್ತೆ ಸಾರಿಗೆ ಮತ್ತು ಸುರಕ್ಷತಾ ವಿಭಾಗವು ಮುಂದಾಗಿ ಹಲವು ಸುರಕ್ಷಾ ಕ್ರಮಗಳಿಗಾಗಿ ಚಿಂತನೆ ನಡೆಸಿದೆ. ಅದರಲ್ಲಿ ಮುಖ್ಯವಾಗಿ ತುರ್ತು ಚಿಕಿತ್ಸೆಗೆ(ಎಮರ್ಜೆನ್ಸಿ ಕೇಸ್)ಮಾತ್ರ ಕೆಂಪುಬಣ್ಣದ ಲೈಟ್ ಬಳಕೆ ಅವಕಾಶ ನೀಡಿ, ಸಾಮಾನ್ಯ ಕೇಸ್‍ ಗಳಿಗೆ ನೀಲಿ ಬಣ್ಣದ ಲೈಟ್ ಹಾಗೂ ಬೇರೆ ರೀತಿಯ ಸೈರನ್ ನೀಡಲು ಮುಂದಾಗಿರುವುದು ಮುಖ್ಯವಾಗಿದೆ.

ಇದಲ್ಲದೇ ಅನುಮಾಸ್ಪದವಾಗಿ ಬರುವ ಆಂಬುಲೆನ್ಸ್ ಗಳನ್ನು ಕಟ್ಟು ನಿಟ್ಟಾಗಿ ತಪಾಸಣೆ ನಡೆಸುವಂತೆ ಸಂಚಾರ ಪೊಲೀಸರಿಗೆ ವಿಭಾಗದದಿಂದ ಸೂಚನೆ ನೀಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಇದರ ಬಗ್ಗೆ ವಿಭಾಗದ ಆಯುಕ್ತೆ ಡಿ.ರೂಪಾ ಯಾವುದೇ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ರೋಗಿಗಳಿಲ್ಲದಿದ್ದರೂ ಕೆಂಪುದೀಪ ಹಾಕಿಕೊಂಡು ಸೈರನ್ ಶಬ್ದ ಮಾಡುತ್ತಾ ಹೋಗುವುದು, ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು ಅಲ್ಲದೇ ಪಾನಮತ್ತರಾಗಿ ಆಂಬುಲೆನ್ಸ್ ಗಳನ್ನು ಚಲಾಯಿಸಿ ದುರುಪಯೋಗಪಡಿಸಿಕೊಳ್ಳುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಇಂತಹ ಕಠಿಣ ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ.

ಆಂಬುಲೆನ್ಸ್ ಗಳ ದುರುಪಯೋಗ ತಡೆಯಲು ಆಸ್ಪತ್ರೆಗಳು ಸ್ವಯಂಪ್ರೇರಿತವಾಗಿ ತುರ್ತು ಸಂದರ್ಭಗಳಲ್ಲಿ ಮಾತ್ರ ಕೆಂಪುಬಣ್ಣದ ಲೈಟ್ ಬಳಕೆಗೆ ಅವಕಾಶ ನೀಡಬೇಕು ಸಾಮಾನ್ಯ ಕೇಸ್‍ಗಳಲ್ಲಿ ನೀಲಿ ಬಣ್ಣದ ಲೈಟ್ ಹಾಗೂ ಬೇರೆ ರೀತಿಯ ಸೈರನ್ ಬಳಸಲು ಮುಂದಾಗಬೇಕಾಗುತ್ತದೆ.

ರೋಗಿಗಳು ಯಾವ ಸ್ಥಿತಿಯಲ್ಲಿದ್ದಾರೆ ಎನ್ನುವುದನ್ನು ಪರಿಗಣಿಸಿ ಕೆಂಪುಬಣ್ಣದ ಲೈಟ್ ಸೈರನ್ ಹಾಕಿದ ಆಂಬುಲೆನ್ಸ್ ಬಳಸಬಹುದು ಸಾಮಾನ್ಯ ಕೇಸ್ ಎನಿಸಿದರೆ ಬೇರೆ ಆಸ್ಪತ್ರೆಗಳಿಗೆ ಸಾಗಿಸುವಾಗ ನೀಲಿ ಬಣ್ಣದ ಲೈಟ್ ಹಾಗೂ ಬೇರೆ ರೀತಿಯ ಸೈರನ್ ಆಂಬುಲೆನ್ಸ್ ಗಳನ್ನು ಬಳಸಬೇಕಾಗುತ್ತದೆ ಇದರ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.

ಇತ್ತೀಚಿಗೆ ರೋಗಿಗಳಿಲ್ಲದಿದ್ದರೂ ಪಾನಮತ್ತರಾಗಿ ಲೈಟ್ ಸೈರನ್ ಹಾಕಿಕೊಂಡು ಹೋಗುತ್ತಿದ್ದ ಐದಾರು ಮಂದಿ ಚಾಲಕರು ತಪಾಸಣೆ ನಡೆಸಿದ ಸಂಚಾರ ಪೊಲೀಸರಿಗೆ ಸಿಕ್ಕಿಬಿದಿದ್ದಾರೆ, ಇದಲ್ಲದೇ ಹಣ ಸಾಗಾಟ ಇನ್ನಿತರ ಅಕ್ರಮ ಚಟುವಟಿಕೆಗಳಿಗೆ ಆಂಬುಲೆನ್ಸ್ ಗಳ ಬಳಕೆ ಮಾಡುತ್ತಿರುವುದು ಕಂಡುಬಂದಿದ್ದು ಇದಕ್ಕೆ ಕಡಿವಾಣ ಹಾಕುವುದು ಅಗತ್ಯವಾಗಿದೆ ಎಂದು, ರಸ್ತೆ ಸಾರಿಗೆ ಮತ್ತು ಸುರಕ್ಷತಾ ವಿಭಾಗ ತಿಳಿಸಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ