ಮೂವರು ಉಗ್ರರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು

Kannada News

12-04-2017

ಉಳ್ಳಾಲದ ಬಂಧಿತ ಶಂಕಿತ ಉಗ್ರರ ಆರೋಪ ಸಾಬೀತು ಹಿನ್ನೆಲೆ ಮೂವರು ಉಗ್ರರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು. ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ. ಮಹತ್ವದ ಆದೇಶ ಹೊರಡಿಸಿದ ನ್ಯಾಯಾಧೀಶೆ ಪುಷ್ಪಾಂಜಲಿ.
ಮಂಗಳೂರು ಹೊರವಲಯದ ಉಳ್ಳಾಲದಲ್ಲಿ ಅಕ್ಟೋಬರ್ 03,2008ರಲ್ಲಿ ಬಂಧಿತರಾಗಿದ್ದರು. ಸುದೀರ್ಘ ವಿಚಾರಣೆ ನಂತರ ಸೈಯ್ಯದ್ ಮಹಮ್ಮದ್ ನೌಷದ್, ಅಹ್ಮದ್ ಬಾವಾ ಅಬೂಬಕ್ಕರ್ ಮತ್ತು ಫಕೀರ್ ಅಹ್ಮದ್ ಆರೋಪ ಸಾಬೀತಾಯಿತು.
2008ರಲ್ಲಿ ಉಳ್ಳಾಲದಲ್ಲಿ 7 ಮಂದಿ ಶಂಕಿತ ಉಗ್ರರ ಬಂಧನವಾಗಿತ್ತು. ಮೂವರ ಮೇಲಿನ ಆರೋಪ ಸಾಬೀತಾಗಿ ನಾಲ್ವರು ಖುಲಾಸೆ. ಮಹಮ್ಮದ್ ಆಲಿ, ಜಾವೇಧ್ ಅಲಿ, ಮಹಮ್ಮದ್ ರಫೀಕ್, ಶಬೀರ್ ಭಟ್ಕಳ ದೋಷಮುಕ್ತರಾಗಿದ್ದು, ಸ್ಫೋಟಕ ಪತ್ತೆ ಮತ್ತು ವಿಧ್ವಂಸಕ ಕೃತ್ಯಕ್ಕೆ ಯೋಜನೆ ಹಿನ್ನೆಲೆ ಏಳು ಮಂದಿಯನ್ನ ಬಂಧಿಸಿದ್ದ ಮಂಗಳೂರು ಪೊಲೀಸರು
ಇಂಡಿಯನ್ ಮುಜಾಹಿದ್ದೀನ್ ನಂಟಿನ ಹಿನ್ನೆಲೆಯಲ್ಲಿ ಬಂಧನ.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ