‘ಸಿಎಂ ವಿರುದ್ಧವೂ ಕ್ರಮ ಕೈಗೊಳ್ಳಬೇಕು’08-12-2017

ಹುಬ್ಬಳ್ಳಿ: ಕಾಂಗ್ರೆಸ್ ನವರು ದೇಶವನ್ನು ಆಳೋಕೆ ಕೇವಲ ನೆಹರು ಕುಟುಂಬಕ್ಕೆ ಮಾತ್ರ ಹಕ್ಕಿದೆ ಎಂದು ತಿಳಿದುಕೊಂಡಿದ್ದಾರೆ ಎಂದು, ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಹುಬ್ಬಳ್ಳಿಯಲ್ಲಿಂದು ಮಾತಮಾಡಿದ ಅವರು, ಮಣಿಶಂಕರ್ ಅಯ್ಯರ್ ಮೇಲೆ ಕಾಂಗ್ರೆಸ್ ಕ್ರಮ ತೆಗೆದುಕೊಂಡಿರುವುದಕ್ಕೆ ವ್ಯಂಗ್ಯವಾಡಿದ್ದಾರೆ. ಗುಜರಾತ್ ಎಲೆಕ್ಷನ್ ಗಾಗಿ ಕಾಂಗ್ರೆಸ್ ಪಕ್ಷ ಮಣಿಶಂಕರ್ ಅಯ್ಯರ್ ಮೇಲೆ ಕ್ರಮ ಕೈಗೊಂಡಿದೆ ಎಂದರು. ಕಾಂಗ್ರೆಸ್ ಒಂದು ವೇಳೆ ಅಂತಹವರ ಮೇಲೆ ಕ್ರಮ ತೆಗೆದು ಕೊಳ್ಳುವುದಾದರೆ, ಸಿಎಂ ಸಿದ್ದರಾಮಯ್ಯ ಅವರ ಮೇಲೂ ರಾಹುಲ್ ಗಾಂಧಿ ಕ್ರಮ ಕೈಗೊಳ್ಳಬೇಕು, ಅವರು ಕೂಡಾ ಮೋದಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದರು.

ಇನ್ನು ಉಮೇಶ್ ಕತ್ತಿ ಪಕ್ಷ ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಮಾಜಿ‌ ಸಚಿವ ಉಮೇಶ ಕತ್ತಿ ನನ್ನ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ, ಹಾಗೇನು ನಮ್ಮಲ್ಲಿ ಅಸಮಾಧಾನವಿಲ್ಲ ಎಂದು ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ