ಮೆಟ್ರೋ ಪ್ರಯಾಣಿಕರಿಗೊಂದು ಕಹಿ ಸುದ್ದಿ..?

Bitter news for Metro passengers ..?

08-12-2017

ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೊಂದು ಕಹಿಸುದ್ದಿ ಹೊರಬಿದ್ದಿದೆ. ಇನ್ನು ಮುಂದೆ ಮೆಟ್ರೋ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆ. ಹೌದು ಇಷ್ಟು ದಿನ ಮೆಟ್ರೋದಲ್ಲಿ ಪ್ರಯಾಣಿಸಲು ನಮಗೆ ಮಾತ್ರ ಟಿಕೆಟ್ ಪಡೆಯಬೇಕಿತ್ತು, ಅದರೆ ಈಗ ಮೆಟ್ರೋದಲ್ಲಿ ಪ್ರಯಾಣಿಸುವಾಗ ನಿಮ್ಮ ಲಗೇಜ್ಗೂ ಸಹ ಟಿಕೆಟ್ ಪಡೆಯಬೇಕು. ಪ್ರತಿ ಬ್ಯಾಗ್ ಗೆ ಮೂವತ್ತು ರೂಪಾಯಿ ದರ ನಿಗದಿ ಮಾಡಲಾಗಿದ್ದು, ಎಷ್ಟು ತೂಕದ ಬ್ಯಾಗ್ ಗಳಿಗೆ ಎಷ್ಟು ರೂಪಾಯಿ ಎಂದು, ಆಡಳಿತ ಮಂಡಳಿ ಸ್ಪಷ್ಟ ಮಾಹಿತಿ ನೀಡದ ಕಾರಣ, ಒಂದು ಬ್ಯಾಗ್ ಗೆ ಮೂವತ್ತು ರೂಪಾಯಿಯಂತೆ ಸಂಗ್ರಹಿಸುತ್ತಿರುವುದಾಗಿ ತಿಳಿದು ಬಂದಿದೆ. ಇದರಿಂದ ಮೆಟ್ರೋ ಪ್ರಯಾಣಿಕರಲ್ಲಿ ಗೊಂದಲ ಸೃಷ್ಟಿಯಾಗಿದೆ.


ಸಂಬಂಧಿತ ಟ್ಯಾಗ್ಗಳು

Metro train luggage ಟಿಕೆಟ್ ಪ್ರಯಾಣಿಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ