ಕಿರುತೆರೆ ನಟನ ಮೇಲೆ ಹಲ್ಲೆಗೆ ಯತ್ನ

attempt to Attack on kannada serial actor

08-12-2017 270

ಬೆಂಗಳೂರು: ಬೆಂಗಳೂರಿನಲ್ಲಿ ಕಿರುತೆರೆ ನಟನಿಗೆ ದುಷ್ಕರ್ಮಿಗಳು ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ, ನಟನ ಮೇಲೆ ಅಟ್ಯಾಕ್ ಮಾಡಿದ್ದಾರೆ. ‘ನಾಗಿಣಿ’ ಧಾರವಾಹಿ ಪ್ರಮುಖ ಪಾತ್ರಧಾರಿ ದಿಕ್ಷೀತ್​ ಶೆಟ್ಟಿ ಮೇಲೆ ದುಷ್ಕರ್ಮಿಗಳು ಹಲ್ಲೆಗೆ ಯತ್ನಿಸಿದ್ದಾರೆ. ವಿಜಯನಗರದ ಮಾರುತಿ ಮಂದಿರದ ಬಳಿ ತಡರಾತ್ರಿ ಈ ಘಟನೆ ನಡೆದಿದೆ.

ಪಲ್ಸರ್​ ಬೈಕ್​ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಕುಡಿದ ಅಮಲಿನಲ್ಲಿ ಸೆಲ್ಫಿಗಾಗಿ ದೀಕ್ಷಿತ್ ಶೆಟ್ಟಿಯನ್ನು ಹಿಂಬಾಲಿಸಿದ ಮೂವರು, ದಿಕ್ಷೀತ್​ ಶೆಟ್ಟಿಯನ್ನು ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ. ಇನ್ನು ಈ ವೇಳೆ ಸೆಲ್ಫಿ ನೀಡಲು ನಿರಾಕರಿಸಿದ್ದಕ್ಕೆ ಕಾರಿನ ಗಾಜು​ ಪುಡಿ ಪುಡಿ ಮಾಡಿ ವಿಕೃತಿ ಮೆರೆದಿದ್ದಾರೆ. ಈ ಕುರಿತು ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಿಡಿಗೇಡಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.ಸಂಬಂಧಿತ ಟ್ಯಾಗ್ಗಳು

Deekshit sheety Serial actor ಕಿರುತೆರೆ ಪಾತ್ರಧಾರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ