ಮ್ಯಾನೇಜರ್ ಕಿರುಕುಳ ನೌಕರ ಆತ್ಮಹತ್ಯೆ

Manager harassment employee suicide

08-12-2017

ಬಳ್ಳಾರಿ: ಬ್ಯಾಂಕ್ ಮ್ಯಾನೇಜರ್ ಕಿರುಕುಳ ತಾಳಲಾರದೇ ಅದೇ ಬ್ಯಾಂಕಿನ ದಿನಗೂಲಿ ನೌಕರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆಯು, ಬಳ್ಳಾರಿಯಲ್ಲಿ ನಡೆದಿದೆ. ಕೃಷ್ಣ ಎಂಬುವರು ಮೃತಪಟ್ಟಿರುವ ದಿನಗೂಲಿ ನೌಕರ. ಬಳ್ಳಾರಿಯ ಅಲ್ಲಿಪುರದ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣ, ಬ್ಯಾಂಕ್ ಮ್ಯಾನೇಜರ್ ಶಿವಪ್ರಸಾದ್ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ವೀಡಿಯೋ ರೆಕಾರ್ಡ್ ಮಾಡಿಟ್ಟು, ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಬಳ್ಳಾರಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

Bank video record ಮ್ಯಾನೇಜರ್ ಆತ್ಮಹತ್ಯೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ