ಆಧಾರ್ ಲಿಂಕ್ ಗೆ ಅವಧಿ ವಿಸ್ತರಣೆ

Deadline for mandatory linking of Aadhaar will be extended

07-12-2017

ನವದೆಹಲಿ: ಸರ್ಕಾರದ ವಿವಿಧ ಸೇವೆಗಳಿಗೆ ಆಧಾರ್ ಸಂಖ್ಯೆ ಜೋಡಿಸುವ ಅವಧಿಯನ್ನು ಮುಂದಿನ ವರ್ಷದ ಮಾರ್ಚ್ 31ರ ವರೆಗೂ ವಿಸ್ತರಿಸುವುದಾಗಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‍ಗೆ ತಿಳಿಸಿದೆ. ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠಕ್ಕೆ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಈ ವಿಷಯ ತಿಳಿಸಿದ್ದಾರೆ. ಆದಾಗ್ಯೂ, ಮೊಬೈಲ್ ಸೇವೆಗಳನ್ನು ಪಡೆದುಕೊಳ್ಳಲು ಫೆಬ್ರವರಿ 6ರವರೆಗೆ ನ್ಯಾಯಾಲಯ ನೀಡಿರುವ ಗಡುವು ಹಾಗೆಯೇ ಉಳಿದುಕೊಂಡಿದೆ. ಏತನ್ಮಧ್ಯೆ ಆಧಾರ್ ಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಲು, ಸುಪ್ರೀಂ ಕೋರ್ಟ್ ರಚಿಸಿರುವ ಸಾಂವಿಧಾನಿಕ ಪೀಠ ಮುಂದಿನ ವಾರ ಮಧ್ಯಂತರ ವಿಚಾರಣೆ ಕೈಗೊಳ್ಳಲಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ