‘ಧರ್ಮವೇ ರಾಜಕಾರಣವಾಗಬಾರದು'07-12-2017

ಶಿರಸಿ: ಶಿರಸಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯನವರು ಮಾತನಾಡಿ, ರಾಜ್ಯದ ಅಭಿವೃದ್ಧಿಗೆ ನಮ್ಮನ್ನ ನಾವು ಅರ್ಪಿಸಿಕೊಳ್ಳುತ್ತೇವೆ, ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಆರಿಸಿ ತರುವಂತೆ ಸಿಎಂ ಶಿರಸಿಯಲ್ಲಿ ಮನವಿ ಮಾಡಿದರು. ನಮ್ಮದು ನುಡಿದಂತೆ ನಡೆದ ಸರ್ಕಾರ, ಕೊಟ್ಟ ಮಾತನ್ನ ಈಡೇರಿಸಿದ್ದೇವೆ ಎಂದರು.

ಬೆಳಗಾವಿ ಅಧಿವೇಶನದಲ್ಲಿ ಪ್ರತಿ ಬಾರಿಯೂ ಹೆಚ್ಚು ಗಲಭೆಗಳು, ಪ್ರತಿಭಟನೆಗಳು ನಡಿಯುತ್ತಿದ್ದವು, ಆದರೆ ಈ ಬಾರಿ ಅದು ಕಡಿಮೆಯಾಗಿದೆ. ಇದಕ್ಕೆ ಕಾರಣ ನಾವು ನೀಡಿದ ಉತ್ತಮ ಆಡಳಿತ ಎಂದು ಹೇಳಿದರು.  ಈ ಬಾರಿ 2.10 ಕೋಟಿ ಬಜೆಟ್ ನೀಡುವ ಭರವಸೆ ನೀಡಿದ್ದು, ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಅನ್ನೋ ಆರೋಪಕ್ಕೆ ಅರ್ಥವೇ ಇಲ್ಲ ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. 

ನಾವು ಮಾತ್ರ ಮಾಡಿದ ಕೆಲಸದಲ್ಲಿ ಸಂಪೂರ್ಣ ಸತ್ಯ ಹೇಳುತ್ತೇವೆ, ಇನ್ನು ಬಿಜೆಪಿ ಅಧಿಕಾರದಲ್ಲಿದ್ದಾಗ ಲೀಟರ್ ಹಾಲಿಗೆ 2 ರೂಪಾಯಿ ಸಹಾಯಧನ ಕೊಡುತ್ತಿದ್ದರು, ಆದರೆ ಈಗ ನಾವು 5ರೂ. ಕೊಡುತ್ತಿದ್ದೇವೆ ಎಂದರು. ಇನ್ನು ಸರ್ಕಾರದ ವಿವಿಧ ಯೋಜನೆಗಳ ಕುರಿತು ಮಾತನಾಡಿ, ಅಂಬೇಡ್ಕರ್, ಬಸವಣ್ಣ, ಗಾಂಧೀಜಿಯವರ ಸಮಾನತೆಯ ತತ್ವಗಳ‌ ಮೇಲೆ ನಂಬಿಕೆಯಿಟ್ಟು ನಾವು ನಡೀಯುತ್ತಿದ್ದೇವೆ ಎಂದರು.  ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಯಾವುದೋ ಧರ್ಮವನ್ನು, ಜಾತಿಯನ್ನು ದೂರವಿಡೋದೇ ಮೋದಿಯ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು, ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜಕಾರಣದಲ್ಲಿ ಧರ್ಮವಿರಬೇಕು ಆದರೇ ಧರ್ಮವೇ ರಾಜಕಾರಣವಾಗಬಾರದು ಎಂದ ಅವರು, ಬಿಜೆಪಿಯವರಿಗೆ ಸಂಸ್ಕಾರವಿಲ್ಲ, ಕೆಟ್ಟ ಭಾಷೆ ಬಳಸುವುದೇ ಅವರ ಸಂಸ್ಕಾರ ಎಂದು ಕಟುಕಿದರು. ಮಾರಿಕಾಂಬಾ ಜಾತ್ರೆಗೆ ಎರಡು ಕೋಟಿ ಕೊಡಲು ಕಾಗೇರಿ ಮನವಿ ಹಿನ್ನೆಲೆ,  ಈ ಬಾರಿ ಎರಡು ಕೋಟೆಗೂ ಹೆಚ್ಚು ಅನುದಾನ ಕೊಡುವ ಭರವಸೆ ನೀಡಿದರು.


ಸಂಬಂಧಿತ ಟ್ಯಾಗ್ಗಳು

siddaramaiah state BJP ಮಾರಿಕಾಂಬಾ ಬಜೆಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ