‘ಡಬಲ್ ಗೇಮ್ ರಾಜಕಾರಣ ಸಹಿಸುವುದಿಲ್ಲ’07-12-2017

ಬೆಂಗಳೂರು: ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯ ಸರ್ಕಾರ ಒಂದು ಲಕ್ಷದ ಇಪ್ಪತ್ತೆಂಟು ಸಾವಿರ ಕೋಟಿ ಸಾಲ ಮಾಡಿದೆ ಎಂದು, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರ ಸ್ವಾಮಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎದ್ ಪಕ್ಷ ಬಿಟ್ಟು ಹೋಗುತ್ತಿರುವವರ ಬಗ್ಗೆ ಎಚ್ಡಿಕೆ ಕಿಡಿಕಾರಿದ್ದಾರೆ. ಹೊಗುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ಹೋಗುವವರ ಬಗ್ಗೆ ಏನೂ ಮಾತನಾಡುವುದೂ ಇಲ್ಲ, ಪಕ್ಷದಿಂದ ಅಲ್ಪಸ್ವಲ್ಪ ಅನುಕೂಲ ಪಡೆದವರು ಪಕ್ಷಕ್ಕೆ ನಿಯತ್ತಾಗಿರಬೇಕು, ಪಕ್ಷಕ್ಕೆ ಡ್ಯಾಮೇಜ್ ಮಾಡಿ ಹೋಗುವುದು ಬೇಕಿಲ್ಲ ಎಂದರು, ಅಲ್ಲದೇ ಡಬಲ್ ಗೇಮ್ ರಾಜಕಾರಣ ಮಾಡುವುದನ್ನು ಸಹಿಸುವುದಿಲ್ಲ ಎಂದು ಗುಡುಗಿದ್ದಾರೆ.

ಶಾಸಕರೇ ಇಲ್ಲದ ಸಂದರ್ಭದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಸಿಎಂ ಘೋಷಣೆ ಮಾಡ್ತಿದ್ದಾರೆ. ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಸರ್ಕಾರದ ವತಿಯಿಂದ ಟೆಂಡರ್ ಕರೆದಿರೋ ಸಂಪ್ರದಾಯ ಇದೇ ಮೊದಲು. ರಾಜ್ಯದ ಜನತೆಯ ತೆರಿಗೆ ಹಣವನ್ನು ಕಾರ್ಯಕ್ರಮದ ಹೆಸರಲ್ಲಿ ಪೋಲು ಮಾಡಲಾಗ್ತಿದೆ ಎಂದು ಆರೋಪಿಸಿದ್ದಾರೆ.

ವರ್ಷಕ್ಕೆ ಐನೂರು ಕೋಟಿ ಜಾಹೀರಾತಿಗೆ ಖರ್ಚು ಮಾಡಲಾಗ್ತಿದೆ, ಈ ರೀತಿ ಜಾಹೀರಾತಿಗೆ ಇಷ್ಟು ಖರ್ಚು ಮಾಡುವ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸಿದ ಅವರು, ಜಾಹೀರಾತು ಕೊಟ್ಟು ಪತ್ರಿಕೆಗಳನ್ನು ಉಳಿಸುವ ಕೆಲಸ ಮಾಡ್ತಿದ್ದೀರಾ, ಇವತ್ತಿನ ದಿನ ಪತ್ರಿಕೆಗಳನ್ನು ನಡೆಸಲು ಕಷ್ಟ ಇದೆ, ಅವರನ್ನಾದರು ಉಳಿಸುವ ಕೆಲಸ ಮಾಡ್ತಿದ್ದೀರಾ ಬಿಡಿ ಎಂದು ವ್ಯಂಗ್ಯವಾಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

H.D.kumara swamy karnataka government ಡಬಲ್ ಗೇಮ್ ಟೆಂಡರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ