ಕಲ್ಲಿನಿಂದ ಜಜ್ಜಿ ವ್ಯಕ್ತಿ ಕೊಲೆ

Horrific murder in bangalore

07-12-2017

ಬೆಂಗಳೂರು: ನಗರದ ಮಾದನಾಯ್ಕನಹಳ್ಳಿಯ ಕಾಚೋಹಳ್ಳಿಯಲ್ಲಿ ನಿರ್ಮಾಣ ಹಂತದ ಮನೆಯೊಂದರ ಮೇಸ್ತ್ರಿಯನ್ನು ಕಲ್ಲಿನಿಂದ ಜಜ್ಜಿ ಕೊಲೆಗೈದು ಮೃತ ದೇಹದ ಮೇಲೆ ಸಿಮೆಂಟ್ ಮೂಟೆಗಳನ್ನು ಜೋಡಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕೊಲೆಯಾದವರು ಕೇರಳ ಮೂಲದ ಜಾಯ್(35) ಎಂದು ಗುರುತಿಸಲಾಗಿದೆ. ಕಾಚೋಹಳ್ಳಿಯ ಸ್ನೇಹಿತರ ಮನೆಯಲ್ಲಿ ಟೈಲ್ಸ್ ಹಾಕಿಸುತ್ತಾ ಅಲ್ಲೇ ವಾಸ್ತವ್ಯ ಹೊಡಿದ್ದ ಜಾಯ್‍ನನ್ನು ದುಷ್ಕರ್ಮಿಗಳು ನಿನ್ನೆ ರಾತ್ರಿ ಕೊಲೆ ಮಾಡಿ ಮೃತ ದೇಹದ ಮೇಲೆ ಸಿಮೆಂಟ್ ಮೂಟೆಗಳನ್ನು ಹಾಕಿ ಪರಾರಿಯಾಗಿದ್ದಾರೆ.

ಮನೆಯ ಮಾಲೀಕ ಇತ್ತೀಚಿಗೆ ಅಸ್ತಮಾದಿಂದ ಮೃತಪಟ್ಟಿದ್ದು ಅವರ ಪುತ್ರನಿಗೆ ಜಾಯ್ ಸ್ನೇಹಿತನಾಗಿದ್ದರು. ಸಾಫ್ಟ್ ವೇರ್ ಉದ್ಯೋಗಿಯಾಗಿದ್ದ ಸ್ನೇಹಿತ ಹೃದರಾಬಾದ್‍ನಲ್ಲಿ ಕೆಲಸ ದೊರೆತಿದ್ದರಿಂದ ಕೆಲದಿನಗಳ ಹಿಂದೆ ಅವರು ಹೋಗಿದ್ದರು.

ಮನೆಯ ಜವಾಬ್ದಾರಿಯನ್ನು ಸ್ನೇಹಿತ ಜಾಯ್‍ಗೆ ನೀಡಿದ್ದು ಮನೆಯ ಕಾಮಗಾರಿಯನ್ನು ನೋಡಿಕೊಳ್ಳುತ್ತಿದ್ದ, ಜಾಯ್ ಅವರ ಪತ್ನಿ ಮಕ್ಕಳು ಕೂಡ ಕೇರಳಕ್ಕೆ ತೆರಳಿದ್ದರು. ಕೊಲೆಗೆ ಕಾರಣಗಳು ತಿಳಿದುಬಂದಿಲ್ಲ, ಮಾದನಾಯ್ಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಗ್ರಾಮಾಂತರ ಎಸ್‍ಪಿ ಅಮಿತ್‍ಸಿಂಗ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Horrific Murder bengalore ಕೊಲೆ ಸಾಫ್ಟ್ ವೇರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ