ಪ್ರಖ್ಯಾತ ಸ್ವಾಮೀಜಿ ವಿರುದ್ಧ ರಾಸಲೀಲೆ ಆರೋಪ

kotturu Swamiji sex scandal allegation

07-12-2017

ಬೆಂಗಳೂರು: ಪ್ರತಿಷ್ಠಿತ ಕೊಪ್ಪಳ ಜಿಲ್ಲೆಯ ಗಂಗಾವತಿಯ ಕಲ್ಮಠದ ಕೊಟ್ಟೊರೇಶ್ವರ ಸ್ವಾಮಿಯು ಹಲವು ಮಹಿಳೆಯರ ಜೊತೆ ನಡೆಸಿರುವ ಕಾಮದಾಟ ಬೆಳಕಿಗೆ ಬಂದಿದೆ.

ಅನೇಕ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಕೊಟ್ಟೂರು ಸಂಸ್ಥೆಯಲ್ಲಿ ಕೆಲಸ ಮಾಡುವ ಶಿಕ್ಷಕಿಯರು, ಅಡುಗೆ ಮಾಡುವ ಮಹಿಳೆಯರು,ಲೈಬ್ರೇರಿಯನ್ ಹೀಗೆ ಹಲವು  ಮಹಿಳೆಯರ ಜೊತೆ ಸ್ವಾಮೀಜಿ ಕಾಮದಾಟ ನಡೆಸಿರುವ ದೃಶ್ಯಗಳು ಬಯಲಾಗಿದ್ದು ಸ್ವಾಮೀಜಿಯು ಹಲವು ಮಹಿಳೆಯರ ಜೊತೆ ಸಂಬಂಧ ಹೊಂದಿರುವ ಆರೋಪ ಕೇಳಿಬಂದಿದೆ. ಇದಲ್ಲದೇ ವಸತಿಗೃಹವೊಂದರಲ್ಲಿ ಮಹಿಳೆಯೊಬ್ಬರ ಜೊತೆ ಕಾಮದಾಟ ನಡೆಸಿರುವ ದೃಶ್ಯಗಳು ಬಯಲಾಗಿದ್ದು ಸ್ವಾಮೀಜಿಯ ವಿರುದ್ದ ಮಠದ ಭಕ್ತರು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೀರಶೈವ ಸಂಪ್ರದಾಯದ ಕಲ್ಮಠದ ಈ ಕಾಮುಕ ಸ್ವಾಮೀಜಿಯು ಹೆಂಗಸರು ಮಾಡುವ ಅಡುಗೆ, ದುಬಾರಿ ಮದ್ಯ ಜೊತೆಗೆ ಮಾಂಸಹಾರವನ್ನು ಇಷ್ಟ ಪಡುತ್ತಾರೆ ಅಲ್ಲದೇ ಬ್ಯಾಂಕಾಕ್, ಥೈವಾನ್ ನಿಂದ ಮಠಕ್ಕೆ ಬರುವ ಮಹಿಳಾ ಭಕ್ತರ ಜೊತೆಯೂ ಸ್ವಾಮೀಜಿ ಸಂಬಂಧ ಹೊಂದಿದ್ದಾರೆ ಎನ್ನುವ ದೂರು ಕೇಳಿಬಂದಿದೆ.

ಶೀಕ್ಷಕಿ ಜೊತೆ ಸಂಬಂಧ: ಕಲ್ಮಠದ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಮಹಿಳೆಯೊಬ್ಬರಿಗೆ ಕಲ್ಮಠದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದ ಸ್ವಾಮೀಜಿಯು ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿ ಆಕೆ ವಿವಾಹವಾಗದಂತೆ ನೋಡಿಕೊಂಡು ಶಿಕ್ಷಕಿಗೆ ನಿವೃತ್ತರಾಗಿ ವಯಸ್ಸಾಗುತ್ತಿದ್ದಂತೆ ಕೈಕೊಟ್ಟಿದ್ದು ನೊಂದ ಆಕೆ ಮಠ ತೊರೆದು ಗಂಗಾವತಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.

ಇನ್ನೂ ಹುಲಿಹೈದರ್ ಗ್ರಾಮದ ಮಹಿಳೆಯೊಬ್ಬರನ್ನು ಮಠದಲ್ಲಿ ತಂದಿಟ್ಟುಕೊಂಡು ಆಕೆಯ ಜೊತೆ ಸಂಬಂಧ ಬೆಳೆಸಿ ಆಕೆಯನ್ನ ಹುಲಿಹೈದರ್ ಗ್ರಾಮಪಂಚಾಯತ್ ಸದಸ್ಯೆಯನ್ನಾಗಿ ಮಾಡಿದ್ದಲ್ಲದೆ ಆಕೆಗೆ ಗಂಗಾವತಿಯಲ್ಲಿ 35 ಲಕ್ಷದ ಮನೆ ಕಟ್ಟಿಸಿಕೊಟ್ಟು ಸಿಸಿ ಕ್ಯಾಮೆರಾ,ಎಸಿ ಹಾಕಿಸಿ ಮಹಿಳೆಯ ಪತಿಗೆ ತಮ್ಮ ಕಾಲೇಜಿನಲ್ಲಿ ಸಿಪಾಯಿ ಕೆಲಸ ನೀಡಿ ತಮ್ಮ ವ್ಯವಹಾರ ಮುಂದುವರೆಸಿದ್ದಾರೆ ಎನ್ನಲಾಗಿದೆ.

ಮಗಳು ಬೇಕು: ಗ್ರಾ.ಪಂ ಸದಸ್ಯೆಯನ್ನಾಗಿ ಮಾಡಿದ ಮಹಿಳೆಯ ಪುತ್ರಿಯು 12ನೇ ಕ್ಲಾಸ್ ಓದುತ್ತಿದ್ದು ಆಕೆಯ ಜೊತೆ ಕೂಡ ಸ್ವಾಮೀಜಿ ಕಾಮದಾಟ ನಡೆಸಿ ಆಕೆ ಗರ್ಭವತಿಯಾದಾಗ ಗದಗದಲ್ಲಿ ಗರ್ಭಪಾತ ಮಾಡಿಸಿದ್ದು ಈಗಲೂ ಆಕೆ ಸ್ವಾಮೀಜಿಯ ಮಠದಲ್ಲಿದ್ದಾಳೆ.

ಮಠದಲ್ಲಿ ಲೈಬ್ರೇರಿಯನ್ ಆಗಿದ್ದ ಮಹಿಳೆಯ ಜೊತೆ ಸಂಬಂಧವಿಟ್ಟುಕೊಂಡು ಆಕೆಗೆ ಎರಡು ಗಂಡು ಮಕ್ಕಳು ಕರುಣಿಸಿರುವ ಆರೋಪವಿದ್ದು, ಸ್ವಾಮಿಯ ಕಾಮದಾಟ ಮಹಿಳೆಯ ಪತಿಗೆ ತಿಳಿದು ಗಲಾಟೆಯಾದಾಗ 15 ಲಕ್ಷ ರೂಪಾಯಿ ನೀಡಿ ಜಗಳ ಬಗೆಹರಿಸಿಕೊಂಡಿದ್ದಾರೆ ಎನ್ನಲಾಗಿದೆ, ಅಷ್ಟೇ ಅಲ್ಲದೇ ಪ್ರತಿ ತಿಂಗಳು ಮಕ್ಕಳಿಗೆ ಹಣನೂ ಕೊಡುತ್ತಿದ್ದು ಲೈಬ್ರೇರಿಯನ್ ಆಗಿದ್ದ ಮಹಿಳೆ ಗದಗ ಜಿಲ್ಲೆಯಲ್ಲಿ ವಾಸವಾಗಿದ್ದಾರೆ. ಕೇಂದ್ರ ಮಠದೊಳಗೆ ಒಬ್ಬ ಮಹಿಳೆ ಇದ್ದು, ಆಕೆಯೊಂದಿಗೆ ಅಲ್ಲದೇ ಬಾಗಲಕೋಟೆ ಜಿಲ್ಲೆಯ ಶಾಖಾಮಠದಲ್ಲಿರುವ ಅಡುಗೆ ಮಹಿಳೆಯೊಂದಿಗೆ ಬಲವಂತವಾಗಿ ಕಾಮತೃಷೆಗೆ ಬಳಸಿಕೊಂಡ ಆರೋಪವೂ ಇದೆ.


ಸಂಬಂಧಿತ ಟ್ಯಾಗ್ಗಳು

kottureshwara Gangavati ಕಲ್ಮಠ ಕಾಮದಾಟ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ