ಶ್ರೀಕೃಷ್ಣ ದೇವರಾಯ ವಿವಿಯ ಮಹತ್ವದ ಆದೇಶ

An important order from Sri Krishnadevaraya university

07-12-2017

ಬಳ್ಳಾರಿ: ನಕಲಿ ಅಂಕಪಟ್ಟಿ ನೀಡಿ ಪದವಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬೆರೆಯಲು ಬಳ್ಳಾರಿಯ ವಿಜಯನಗರದ ಶ್ರೀ ಕೃಷ್ಣ ದೇವರಾಯ ವಿವಿ ಮಹತ್ವದ ಆದೇಶ ಹೊರಡಿಸಿದೆ. ಇದರಿಂದ ನಕಲಿ ಅಂಕಪಟ್ಟಿ ನೀಡಿ ಪದವಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. 866 ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ ನೀಡಲು ಆದೇಶಿಸಿದೆ. ಆದರೆ ಇವರಿಗೆ ಪ್ರತ್ಯೇಕವಾಗಿ ಪರೀಕ್ಷೆ ನಡೆಸಲು ವಿವಿ ಸೂಚಿಸಿದೆ. ಅದರೆಂತೆ ಪರೀಕ್ಷಾ ಶುಲ್ಕ ಕಟ್ಟಲು  ಆಡಳಿತ ಮಂಡಳಿ ಅಧಿಸೂಚನೆ ಹೊರಡಿಸಿದೆ. ಈ ಹಿಂದೆ ನಕಲಿ ಅಂಕಪಟ್ಟಿ ಸಲ್ಲಿಸಿದ್ದ 866 ವಿದ್ಯಾರ್ಥಿಗಳನ್ನು ಪರೀಕ್ಷೆಯಿಂದ ದೂರ ಉಳಿಸಲಾಗಿತ್ತು, ಆದರೆ ಇದೀಗ ಶ್ರೀ ಕೃಷ್ಣ ದೇವರಾಯ ವಿವಿ ಆದೇಶದಿಂದ, ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

Sri Krishnadevaraya Bellari ಅಂಕಪಟ್ಟಿ ವಿದ್ಯಾರ್ಥಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ