ಶಿರಸಿಯಲ್ಲಿ ಸಿಎಂ ಬೃಹತ್ ಸಮಾವೇಶ

CM

07-12-2017

ಶಿರಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ಕನ್ನಡ ಜಿಲ್ಲೆ ಪ್ರವಾಸ ಕೈಗೊಂಡಿದ್ದು, ಇಂದು ಶಿರಸಿ, ಮುಂಡಗೋಡ, ಹಳಿಯಾಳದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸುಮಾರು 148 ಕೋಟಿ ಮೊತ್ತದ 56 ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಸಿಎಂ ಆಗಮನ ಹಿನ್ನೆಲೆ, ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. 1 ಸಾವಿರ ಹೆಡ್ ಕಾನ್ಸ್ಟೇಬಲ್, 1500 ಪೊಲೀಸ್ ಪೇದೆ, 50 ಪಿಎಸ್ಐ, 25 ಸಿಪಿಐ, 8ಮಂದಿ ಡಿವೈಎಸ್ಪಿ, 3 ಮೂವರು ಎಎಸ್ಪಿಗಳನ್ನು ನಿಯೋಜಿಸಲಾಗಿದ್ದು, ಪೊಲೀಸ್ ಇಲಾಖೆ ಭಾರೀ ಕಟ್ಟೆಚ್ಚರ ವಹಿಸಿದೆ.

ಇನ್ನು ಸಿಎಂ ಕಾರ್ಯಕ್ರಮಕ್ಕೆ ಶಿರಸಿಯಲ್ಲಿ ಅದ್ದೂರಿ ವೇದಿಕೆ ಸಜ್ಜುಗೊಂಡಿದ್ದು, ನಗರದ ವಿಕಾಸಾಶ್ರಮ ಬಯಲಿನಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಸಮಾವೇಶಕ್ಕೆ ಐದು ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸಿಎಂ ಆಗಮನ ಹಿನ್ನೆಲೆ ಪಕ್ಷದ ಕಾರ್ಯಕರ್ತರಲ್ಲಿ ಸಂಭ್ರಮ ಮನೆಮಾಡಿದ್ದು, ನಗರದಲ್ಲಿ ಬೈಕ್ ರ‍್ಯಾಲಿ ಕೈಗೊಂಡಿದ್ದಾರೆ, ಇದರಿಂದ ನಗರದಲ್ಲಿ ಸಂಚಾರ ವ್ಯತ್ಯಯ ಉಂಟಾಗುವ ಸಾಧ್ಯತೆಯಿದ್ದು, ಸಹಕರಿಸುವಂತೆ ನಗರಾಡಳಿತದ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಈ ಕುರಿತು ಸುಗಮ ಸಂಚಾರಕ್ಕೆ ಪೊಲೀಸರು ಬೇರೆ ಬೇರೆ ಕಡೆ ಸಂಚರಿಸಲು ಮಾರ್ಗಸೂಚಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Siddaramaiah Conference ಉದ್ಘಾಟನೆ ಶಂಕುಸ್ಥಾಪನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ