ಆದಿ ಚುಂಚನಗಿರಿಯಲ್ಲಿ ಕೆ.ಸಿ ವೇಣುಗೋಪಾಲ್

KC Venugopal in Adichunchanagiri

07-12-2017

ಮಂಡ್ಯ: ಮಂಡ್ಯದಲ್ಲಿನ ಆದಿಚುಂಚನಗಿರಿ ಮಠಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹಾಗು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಭೇಟಿ ನೀಡಿದ್ದಾರೆ. ಮಠದಲ್ಲಿ ನಿರ್ಮಲಾನಂದನಾಥ ಶ್ರೀಗಳನ್ನು ಭೇಟಿ ಮಾಡಿದ ಅವರು, ಈ ವೇಳೆ ಶ್ರೀಗಳ ಕಾಲಿಗೆ ಬಿದ್ದು ಉಭಯನಾಯಕರು ಆಶೀರ್ವಾದ ಪಡೆದು, ಕೆಲಕಾಲ ಶ್ರೀಗಳೊಂದಿಗೆ ಮಾತುಕತೆ ನಡೆಸಿದರು. ಮಾತುಕತೆ ವೇಳೆ, ವೇಣುಗೋಪಾಲ್ ಅವರನ್ನು ಯಾವ ಊರು ಎಂದು ಕೇಳಿದ ಶ್ರೀಗಳು, ವೇಣುಗೋಪಾಲ್ ಕಾಸರಗೋಡು ಎಂದು ಉತ್ತರ ನೀಡಿದ್ದಾರೆ. ಆಗ ನಿರ್ಮಲಾನಂದನಾಥ ಶ್ರೀಗಳು ಕಾಸರಗೋಡು ಕರ್ನಾಟಕದ ಭಾಗ ‌ಎಂದಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ