ನಿಂತಿದ್ದ ಬಸ್ ಗೆ ಲಾರಿ ಡಿಕ್ಕಿ

Bus and Lorry Accident

06-12-2017

ಬೆಂಗಳೂರು: ನಗರದ ಹೊರವಲಯದ ಆನೇಕಲ್‍ನ ಚಂದಾಪುರ ಬಳಿ ಮುಂಜಾನೆ ಅಪಘಾತವಾಗಿ ನಿಂತಿದ್ದ ತಮಿಳುನಾಡು ಸಾರಿಗೆ ಬಸ್‍ಗೆ ಹಿಂದಿನಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದು ಬಸ್ ಚಾಲಕ ಸ್ಥಳದಲ್ಲಿಯೇ ಮೃತಪಟ್ಟರೆ ಕ್ಲೀನರ್ ಸೇರಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತಪಟ್ಟವರನ್ನು ತಮಿಳುನಾಡು ಸಾರಿಗೆ ಬಸ್ ಚಾಲಕ ಶಿವಕುಮಾರ್(35) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿರುವ ಲಾರಿ ಚಾಲಕ ಮತ್ತು ಕ್ಲೀನರ್ ಸ್ಥಿತಿ ಗಂಭೀರವಾಗಿದೆ. ರಾಷ್ಟ್ರೀಯ ಹೆದ್ದಾರಿ 7ರ ಚಂದಾಪುರ ಬಳಿ ಮುಂಜಾನೆ ನಗರದ ಕಡೆ ಬರುತ್ತಿದ್ದ ತಮಿಳುನಾಡು ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದು, ಪ್ರಯಾಣಿಕರು ಯಾವುದೇ ಆಪಾಯವಿಲ್ಲದೇ ಪಾರಾಗಿದ್ದಾರೆ.

ಅಪಘಾತದಿಂದ ಕೆಟ್ಟು ನಿಂತಿದ್ದ ಬಸಿನಲ್ಲಿದ್ದ ಪ್ರಯಾಣಿಕರನ್ನು ಚಾಲಕ ಬೇರೊಂದು ಬಸ್‍ಗೆ ಕಳುಹಿಸಿದ ಚಾಲಕ ಶಿವಕುಮಾರ್ ಬಸ್ ಹಿಂಭಾಗ ಪರಿಶೀಲನೆ ನಡೆಸುತ್ತಾ ನಿಂತಿದ್ದರು. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಲಾರಿ ಬಸ್‍ಗೆ ಡಿಕ್ಕಿ ಹೊಡೆದಿದೆ. ಎರಡು ವಾಹನದ ಮಧ್ಯೆ ಸಿಲುಕಿದ ಶಿವಕುಮಾರ್ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಸೂರ್ಯಸಿಟಿ ಪೊಲೀಸರು ಧಾವಿಸಿ ಎರಡು ವಾಹನಗಳನ್ನು ಕ್ರೇನ್ ಮೂಲಕ ಬೇರ್ಪಡಿಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Accident Tamilnadu Bus ಆನೇಕಲ್‍ ಕ್ಲೀನರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ