ಸೈಕಲ್ ಕಳ್ಳನಿಗೆ ಧರ್ಮದೇಟು

Cycle Thief in bangalore

06-12-2017

ಬೆಂಗಳೂರು: ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಸೈಕಲ್ ಕದಿಯಲು ಬಂದ ಕಳ್ಳನನ್ನು ಬೆನ್ನಟ್ಟಿ ಹಿಡಿದ ಸ್ಥಳೀಯರು ಧರ್ಮದೇಟು ಕೊಟ್ಟು ಸುಬ್ರಮಣ್ಯನಗರ ಪೊಲೀಸರಿಗೆ ಒಪ್ಪಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.  ಸ್ಥಳೀಯರು ಹಿಡಿದುಕೊಟ್ಟ ಕಳ್ಳನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗಿದೆ. ಕಳೆದ ಡಿ.3ರ ಸಂಜೆ 6ರ ವೇಳೆ ಸುಬ್ರಮಣ್ಯನಗರಕ್ಕೆ ಬಂದ ಕಳ್ಳ ವೆಂಕಟೇಶ್ ಎನ್ನುವರ ಮನೆಯ ಕಾಂಪೌಡ್ ಒಳಗೆ ನುಗ್ಗಿ ಡೊಡ್ಡ ಕಟರ್ ನಿಂದ ಲಾಕ್ ಮುರಿದು ಸೈಕಲ್ ಕಳವು ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಲಾಕ್ ಮುರಿಯುವ ಶಬ್ದ ಕೇಳಿ ಕಳ್ಳ ಕಳ್ಳ ಎಂದು ಕೂಗಿಕೊಂಡಾಗ ಧಾವಿಸಿದ ಸ್ಥಳೀಯರು ಪರಾರಿಯಾಗುತ್ತಿದ್ದ ಕಳ್ಳನ ಬೆನ್ನತ್ತಿದ್ದಾರೆ.

ಸ್ಥಳೀಯರಿಂದ ತಪ್ಪಿಸಿಕೊಳ್ಳಲು ಹೋಗಿ ಕಾರೊಂದರ ಕೆಳಗೆ ಅವಿತು ಕುಳಿತುಕೊಂಡಿದ್ದ ಆತನನ್ನು  ನೋಡಿ ಹೊರಗೆ ಎಳೆದು ಧರ್ಮದೇಟು ಕೊಟ್ಟು ವಿಚಾರಿಸಿದಾಗ ನನ್ನ ಹೆಸರು ಎಂದರೆ ಮಲ್ಲೇಶ, ಕಲ್ಲೇಶ ಎಂದು ಎರಡು ಮೂರು ಹೆಸರು ಹೇಳಿದ್ದಾನೆ. ಕೂಡಲೇ ಪೊಲೀಸರನ್ನು ಕರೆಸಿ ಒಪ್ಪಿಸಲಾಗಿದ್ದು, ಆರೋಪಿಯನ್ನು ಸುಬ್ರಮಣ್ಯನಗರ ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ಆರೋಪಿಯು ಕಳವು ಮಾಡಿದ ಸೈಕಲ್‍ಗಳನ್ನು ಸಂಡೇ ಬಜಾರ್‍ನಲ್ಲಿ ಮಾರಾಟ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದಾನೆ.


ಸಂಬಂಧಿತ ಟ್ಯಾಗ್ಗಳು

cycle thief Bengaluru ಆರೋಪಿ ಸಂಡೇ ಬಜಾರ್‍


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ