ಅಧ್ಯಕ್ಷರಾದ ನಂತರ ಮೊದಲು ಕರ್ನಾಟಕಕ್ಕೆ..?

first visit to karnataka..?

06-12-2017 638

ಬೆಂಗಳೂರು: ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ನಂತರ, ಮೊದಲು ಕರ್ನಾಟಕಕ್ಕೆ ಭೇಟಿ ನೀಡಲು ರಾಹುಲ್ ಗಾಂಧಿ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಮುಂದಿನ ಲೋಕಸಭಾ ಚುನಾವಣೆಯನ್ನು ಎದುರಿಸಲು ಕರ್ನಾಟಕದಿಂದಲೇ ಜೈತ್ರ ಯಾತ್ರೆ ಆರಂಭಿಸಲು ರಾಹುಲ್ ಗಾಂಧಿ ತೀರ್ಮಾನಿಸಿದ್ದು, ಡಿಸೆಂಬರ್ 19 ರಂದು ಅಧಿಕೃತವಾಗಿ ಅವರು ಎಐಸಿಸಿ ಅಧ್ಯಕ್ಷ ಪಟ್ಟಕ್ಕೇರಲಿದ್ದಾರೆ. ದೇಶದಲ್ಲಿ ಪದೇ ಪದೇ ಕಾಂಗ್ರೆಸ್ ಪಕ್ಷಕ್ಕೆ ಚೈತನ್ಯ ನೀಡಿರುವ ಕರ್ನಾಟಕ, ಅಜ್ಜಿ ಇಂದಿರಾಗಾಂಧಿ ರಾಜಕೀಯವಾಗಿ ಸೋತು ಸುಸ್ತಾದ ಕಾಲದಲ್ಲಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಇಂದಿರಾಗಾಂಧಿಯವರು ಗೆದ್ದು, ಮರಳಿ ಶಕ್ತಿ ಪಡೆದಿದ್ದರು. ಈ ಎಲ್ಲ ಬೆಳವಣಿಗೆಗಳ ಕುರಿತು ಮೊನ್ನೆ ನವದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಬಳಿ ರಾಹುಲ್ ಗಾಂಧಿಯವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ ಎಂದು ಉನ್ನತಮೂಲಗಳು ತಿಳಿಸಿವೆ.

ರಾಷ್ಟ್ರ ರಾಜಕೀಯದಲ್ಲಿ ಈಗ ಕುಸಿತ ಕಂಡಿರುವ ಪಕ್ಷಕ್ಕೆ ಚೈತನ್ಯ ತುಂಬುತ್ತಿರುವುದೇ ಕರ್ನಾಟಕ. 2004 ರ ಲೋಕಸಭಾ ಚುನಾವಣೆಗೆ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಶಕ್ತಿಯುತವನ್ನಾಗಿಸಿದ್ದೇ ಕರ್ನಾಟಕ ಎಂದು ರಾಹುಲ್ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಇದೇ ರೀತಿ ತಮ್ಮ ತಾಯಿ ಶ್ರೀಮತಿ ಸೋನಿಯಾಗಾಂಧಿ ಅವರನ್ನು ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಭಾರೀ ಬಹುಮತಗಳ ಅಂತರದಿಂದ ಆಯ್ಕೆಯಾಗಿದ್ದರು ಎಂಬುದನ್ನು ರಾಹುಲ್ ಗಾಂಧಿ ಸ್ಮರಿಸಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಂದು ಘೋಷಿಸಿದ ನಂತರ ಮೊದಲು ಕರ್ನಾಟಕಕ್ಕೇ ಬರುತ್ತೇನೆ. ಅಲ್ಲಿಂದಲೇ ಮುಂದಿನ ಲೋಕಸಭಾ ಚುನಾವಣೆಗೆ ಜೈತ್ರ ಯಾತ್ರೆ ಆರಂಭವಾಗಲಿ ಎಂದಿದ್ದಾರೆ ರಾಹುಲ್ ಗಾಂಧಿಯವರು ಎಂದು ಮೂಲಗಳು ಹೇಳಿವೆ.ಸಂಬಂಧಿತ ಟ್ಯಾಗ್ಗಳು

Rahul Gandhi AICC ಚುನಾವಣೆ ರಾಷ್ಟ್ರ ರಾಜಕೀಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ