ಕೊಲೆ ಮಾಡಿ, ಕೊಳೆತ ದೇಹಕ್ಕೆ ಬೆಂಕಿ

dead body found in construction building

06-12-2017

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಕೊಲೆ ಮಾಡಿ ಕೊಳೆತ ನಂತರ ಬೆಂಕಿ ಹಚ್ಚಿರುವ ಮೃತದೇಹವು ವೈಯಾಲಿಕಾವಲ್‍ನ ಭಾಷ್ಯಂ ವೃತ್ತದ ಬಳಿ ಪತ್ತೆಯಾಗಿದೆ. ಮೇಲ್ನೋಟಕ್ಕೆ ಮೃತದೇಹವು ಹೆಣ್ಣೋ ಗಂಡೋ ಎನ್ನುವುದು ಗೊತ್ತಾಗಿಲ್ಲ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿರುವ ವೈಯಾಲಿ ಕಾವಲ್ ಪೊಲೀಸರು ಮೃತದೇಹವನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ.

ಇಂದಿರಾನಗರದ ಆನಂದ್ ಎನ್ನುವರು ಭಾಷ್ಯಂ ವೃತ್ತದ ಬಳಿಯಿರುವ ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ನಿವಾಸದ ಬಳಿ ನಿರ್ಮಾಣ ಮಾಡುತ್ತಿರುವ ಮನೆಯ 4ನೇ ಮಹಡಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಗುರುತಿಸಲಾಗದಷ್ಟು ಸುಟ್ಟು ಹೋಗಿದೆ.

ನಿರ್ಮಾಣ ಹಂತದ ಮನೆಯು ಕೆಲ ದಿನಗಳ ಕಾಲ ನ್ಯಾಯಾಲಯದ ವ್ಯಾಜ್ಯದಿಂದಾಗಿ ಸ್ಥಗಿತಗೊಂಡಿತ್ತು. ಇತ್ತೀಚೆಗೆ ವ್ಯಾಜ್ಯ ಪರಿಹಾರವಾಗಿ ಆನಂದ್ ಅವರು ನಿರ್ಮಾಣ ಕಾರ್ಯ ಮುಂದುವರೆಸಿದ್ದರು. ಖಾಲಿ ಬಿದ್ದಿದ್ದ ಈ ಕಟ್ಟಡದಲ್ಲಿ ಚಿಂದಿ ಆಯುವವರು, ಕೂಲಿ ಕಾರ್ಮಿಕರು ಬಂದು ಹೋಗುತ್ತಿದ್ದರು. ಕೊಲೆ ಮಾಡಿರುವ ಆರೋಪಿಗಳ ಸುಳಿವು ಪತ್ತೆಯಾಗಿದ್ದು, ಪ್ರಕರಣವನ್ನು ಆದಷ್ಟು ಬೇಗ ಪತ್ತೆಹಚ್ಚುವುದಾಗಿ ಪ್ರಕರಣ ದಾಖಲಿಸಿರುವ ವೈಯಾಲಿ ಕಾವಲ್ ಪೊಲೀಸರು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

dead body Bhashyam circle ಇಂದಿರಾನಗರ ಚಿಂದಿ ಆಯುವ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ