ಜಾತಿ-ಅಸ್ಪೃಶ್ಯತೆ ಬಗ್ಗೆ ಎದ್ದ ಕೂಗು

In the name of God - religion silliness

06-12-2017

ಬೆಳಗಾವಿ: ಸಂವಿಧಾನ ಪರಾಮರ್ಶೆ ಹೆಸರಿನಲ್ಲಿ ಸಂವಿಧಾನವನ್ನೇ ಬದಲಾಯಿಸುವ ಹುನ್ನಾರ ನಡೆದಿದೆ. ಕೆಲವು ಸ್ವಾಮೀಜಿಗಳು ಇವತ್ತು ‌ಮೌಡ್ಯವನ್ನು ತುಂಬುವ ಕೆಲಸ ಮಾಡುತ್ತಿದ್ದಾರೆ ಎಂದು, ಬೆಳಗಾವಿಯಲ್ಲಿ ನಡೆಯುತ್ತಿರುವ ಮೌಢ್ಯ ವಿರೋಧಿ ಸಂಕಲ್ಪ ದಿನಾಚರಣೆಯ ಕಾರ್ಯಕ್ರಮದಲ್ಲಿ, ಜನಪರ ‌ಹೋರಾಟಗಾರ್ತಿ ಕೆ.ನೀಲಾ ಹೇಳಿದ್ದಾರೆ.

ಇದುವರೆಗೆ ಕೆಲವರಿಗೆ ರಾಮ ಅವರ ಅಸ್ತ್ರವಾಗಿತ್ತು. ಈಗ ಹನುಮಂತ ಅವರ ಅಸ್ತ್ರವಾಗಿದ್ದಾರೆ. ದೇವರು, ಧರ್ಮದ ಹೆಸರಿನಲ್ಲಿ ಸಂಸದರೇ ಮೌಢ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೇಶದಲ್ಲಿ ದೊಡ್ಡ ದೊಡ್ಡ ಚಳುವಳಿಗಳು ನಡೆದವು, ಅವರು ನುಡಿದಂತೆ ನಡೆದರು. ಕೆಟ್ಟ ಪಿಂಡ ಹೇಳಿಕೆ ಮತ್ತು ಹೆಂಗಸರ ಬಗ್ಗೆ ರಾಜಕಾರಣಿಗಳು‌ ಹೀಗಳೆಯುವ ವಿಚಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಡುಪಿಯಲ್ಲಿ ಧರ್ಮ ಸಂಸತ್ ನಡೆಯಿತು. ಅದರಲ್ಲಿ ಮನುಸ್ಮೃತಿಯ ಜಾತಿ ವಿರೋಧಿ, ಮಹಿಳಾ‌ ವಿರೋಧಿಯಾಗಿದ್ದ ಇದನ್ನು ನೀವು ವಿರೋಧಿಸುತ್ತಿರಾ.? ಎಂದು  ಧರ್ಮ ಸಂಸತ್ತಿನಲ್ಲಿ ಭಾಗಿಯಾದವರನ್ನು ಪ್ರಶ್ನಿಸಿದ್ದಾರೆ.

ಇನ್ನು ಕಾರ್ಯಕ್ರಮದಲ್ಲಿ ನಿಜಗುಣಾನಂದ ಸ್ವಾಮಿಜೀ ಮಾತನಾಡಿ, ಧರ್ಮ ಸಂಸತ್ತಿನಲ್ಲಿ ಅಸ್ಪೃಶ್ಯತೆ ಬಗ್ಗೆ ದೊಡ್ಡ ಕೂಗ ಕೇಳಿ ಬಂದಿದೆ, ಈಗ ಇವರಿಗೆ ಅಸ್ಪೃಶ್ಯತೆ ಬಗ್ಗೆ ನೆನಪಾಗಿದೆ, ಈ ಮೊದಲು ಆರ್ಯ, ಬ್ರಾಹ್ಮಣ, ಪುರೋಹಿತರು ಆಳ್ವಿಕೆ ಮಾಡಿದ್ರು, ಈಗ ಹಿಂದು ಅಂತ ಹೇಳಿ ನಮ್ಮ ಮೇಲೆ ಆಳ್ವಿಕೆ ಮಾಡ್ತಾ ಇದೆ ಎಂದು ಹೇಳಿದರು. ರಾಷ್ಟ್ರೀಯತೆ, ಯುವ‌ ಬ್ರೀಗೆಡ್ ಅಂತಹ ಶಬ್ದಗಳಿಂದ ದಬ್ಬಾಳಿಕೆ ನಡೆದಿದೆ ಎಂದರು.


ಸಂಬಂಧಿತ ಟ್ಯಾಗ್ಗಳು

Constitution Nationality ಧರ್ಮ ಸಂಸತ್ ಅಸ್ಪೃಶ್ಯತೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ