ಕ್ರೀಡಾಪಟು ಮೇಲೆ ಲೈಂಗಿಕ ದೌರ್ಜನ್ಯ

Sexual assault on athlete

06-12-2017

ಬೆಂಗಳೂರು: ನಗರದ ಚಿಕ್ಕಜಾಲದಲ್ಲಿನ ವಿದ್ಯಾನಗರದ ಕ್ರೀಡಾ ಅಕಾಡೆಮಿಯೊಂದರಲ್ಲಿ ತರಬೇತಿ ಪಡೆಯುತ್ತಿದ್ದ 15 ವರ್ಷ ವಯಸ್ಸಿನ ಅಪ್ರಾಪ್ತೆ ರಾಷ್ಟ್ರೀಯ ಕ್ರೀಡಾಪಟುವಿನ ಮೇಲೆ ತರಬೇತುದಾರ ಲೈಂಗಿಕ ದೌರ್ಜನ್ಯ ನಡೆಸಿರುವ ಹೀನ ಕೃತ್ಯ ಬೆಳಕಿಗೆ ಬಂದಿದೆ.

ಚಿಕ್ಕಜಾಲದ ವಿದ್ಯಾನಗರ ಕ್ರಾಸ್‍ನ ಕ್ರೀಡಾ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದ ರಾಷ್ಟ್ರೀಯ ಕ್ರೀಡಾಪಟುವಾಗಿದ್ದ 9ನೇ ತರಗತಿ ವಿದ್ಯಾರ್ಥಿನಿಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿದ ತರಬೇತುದಾರ ಮಂಜುನಾಥ್(52)ನನ್ನು ಬಂಧಿಸಲಾಗಿದೆ ಎಂದು, ಡಿಸಿಪಿ ಎಸ್. ಗಿರೀಶ್ ತಿಳಿಸಿದ್ದಾರೆ.

ಅಕಾಡೆಮಿಯಲ್ಲಿ ಹಲವು ದಿನಗಳಿಂದ ತರಬೇತಿ ಪಡೆಯುತ್ತಿದ್ದ ಬಾಲಕಿಯು ರಾಷ್ಟ್ರೀಯ ಮಟ್ಟದ ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸಿ ನಾಲ್ಕೈದು ಪದಕಗಳನ್ನು ಗಳಿಸಿದ್ದಳು. ಹೆಚ್ಚಿನ ತರಬೇತಿ ಪಡೆಯಲು ಅಕಾಡೆಮಿಗೆ ಬರುತ್ತಿದ್ದ ಬಾಲಕಿಗೆ ಆರೋಪಿಯು ತರಬೇತಿ ನೀಡುವ ವೇಳೆ ಗುಪ್ತಾಂಗಗಳನ್ನು ಮುಟ್ಟಿ ವಿಕೃತಿ ಮೆರೆಯುತ್ತಿದ್ದ. ಬಾಲಕಿಗೆ ಮೊದಲು ಇದು ಅರಿವಿಗೆ ಬಂದಿಲ್ಲ. ಇತ್ತೀಚೆಗೆ ವಿಶಾಖಪಟ್ಟಣದಲ್ಲಿ ನಡೆದ ಕ್ರೀಡಾಸ್ಪರ್ಧೆಗೆ ಕರೆದುಕೊಂಡು ಹೋಗಿದ್ದ ಆರೋಪಿಯು, ರೈಲಿನಲ್ಲಿ ಹೋಗಿ ಬರುವ ವೇಳೆ ಮತ್ತೆ ಅದೇ ಚಾಳಿ ಮುಂದುವರೆಸಿದ್ದನು.

ಮಂಜುನಾಥ್‍ನ ಕಿರುಕುಳದಿಂದ ನೊಂದ ಬಾಲಕಿಯು ಪೋಷಕರಿಗೆ ವಿಷಯ ತಿಳಿಸಿ, ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿರುವ ಸಂಪಿಗೆ ಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

sexual harrasment Athlete ಅಕಾಡೆಮಿ ರಾಷ್ಟ್ರೀಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ