'ಮೋದಿ ಒಬ್ಬರಿಂದಲೇ ಬದಲಾವಣೆ ಸಾಧ್ಯವಿಲ್ಲ'06-12-2017

ಉಡುಪಿ: ದೇಶದಲ್ಲಿ ಸತ್ಯ ಸಾಯಲ್ಲ- ಸತ್ಯನೇ ಗೆಲ್ಲೋದು, ಸ್ಮಾರ್ಟ್ ಆಗಿ ನಾನು ಪಕ್ಷ ಬಲಪಡಿಸುತ್ತೇನೆ ಎಂದು ನಟ ಹಾಗು ಕೆಪಿಜೆಪಿ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದ್ದಾರೆ. ಉಡುಪಿಯಲ್ಲಿ ಪಕ್ಷದ ಪ್ರಚಾರ ಕೈಗೊಂಡು ಮಾತನಾಡಿದ ಅವರು, ‘ಆಪ್ ಪಕ್ಷ’ ಫಂಡ್ ನಿಂದ ಹಾಳಾಯ್ತು, ಅಣ್ಣಾ ಹಜಾರೆ ಅವರ ಬೆಂಬಲ ಕೇಜ್ರಿವಾಲ್ ಗೆ ಇತ್ತು, ಕೇಜ್ರಿವಾಲ್ ಇನ್ನೂ ಚೆನ್ನಾಗಿ ಕೆಲಸ ಮಾಡಬಹುದಿತ್ತು ಎಂದರು.

ನನಗೆ ರಾಷ್ಟೀಯ ಪಕ್ಷಗಳಿಂದ ಬೇಡಿಕೆ ಬಂದಿದೆ, 15 ವರ್ಷಗಳಿಂದಲೂ ಆಹ್ವಾನ ಬರ್ತಾನೇ ಇದೆ, ನನ್ನ ಕಲ್ಪನೆ ಅವರ ಜೊತೆ ಹೊಂದಾಣಿಕೆಯಾಗುತ್ತಿಲ್ಲ ಎಂದರು. ಅದಲ್ಲದೇ ನನಗೆ 50 ಸಾವಿರ ಇ-ಮೇಲ್ ಬಂದಿವೆ, 30 ಸಾವಿರ ಮಂದಿ ಕ್ರಿಯಾಶೀಲ ಜನ ನನ್ನ ಜೊತೆಗಿದ್ದಾರೆ, ಆತ್ಮತೃಪ್ತಿಗಾಗಿ ರಾಜಕೀಯಕ್ಕೆ ಬಂದಿದ್ದೇನೆ ಎಂದು ತಮ್ಮ ಮನದಾಳದ ಮಾತನ್ನು ಹೊರಹಾಕಿದ್ದಾರೆ.

ಇನ್ನು ಮೋದಿಯೊಬ್ಬರಿಂದಲೇ ಬದಲಾವಣೆ ಸಾಧ್ಯವಿಲ್ಲ, ಜನ ಬದಲಾಗದಿದ್ದರೆ ದೇಶ ಬದಲಾಗಲ್ಲ, ನಾನು ಪ್ರ್ಯಾಕ್ಟಿಕಲ್ ಇಲ್ಲ ಅಂತ ಜನ ನಗುತ್ತಿದ್ದಾರೆ, ಪ್ರಜೆಗಳು ಮಾತನಾಡುವ ಕಾಲ ಬಂದಿದೆ, ಎಂ.ಎಲ್.ಎ ಸೀಟು ಗೆಲ್ಲಲು 50 ಕೋಟಿ ಬೇಕಂತೆ, ಪ್ರಜಾಪ್ರಭುತ್ವ ಎಲ್ಲಿಗೆ ತಲುಪಿದೆ ನೋಡಿ ಎಂದರು.


ಸಂಬಂಧಿತ ಟ್ಯಾಗ್ಗಳು

Upendra KPJP ಅಣ್ಣಾ ಹಜಾರೆ ಕೇಜ್ರಿವಾಲ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ