ಭಟ್ಕಳದಲ್ಲಿ ಭಾರೀ ಕಟ್ಟೆಚ್ಚರ...!

police high protection in Bhatkal

06-12-2017

ಉತ್ತರ ಕನ್ನಡ: ಎರಡು ದಿನಗಳ ಕಾಲ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರು, ಉತ್ತರ ಕನ್ನಡ ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ. ಇಂದು, ಭಟ್ಕಳ, ಕುಮಟಾ ಮತ್ತು ಕಾರವಾರದಲ್ಲಿ ಕಾರ್ಯಕ್ರಮಗಳಿದ್ದು, ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇನ್ನು ಸಿಎಂ ಆಗಮನ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಭದ್ರತೆ ಕೈಗೊಂಡಿದ್ದಾರೆ. ಸಿದ್ದರಾಮಯ್ಯ ಭೇಟಿ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, 19 ಡಿ.ಆರ್ ತುಕಡಿ, 1 ಸಾವಿರ ಮುಖ್ಯ ಪೇದೆ, 1500 ಪೇದೆಗಳು, 50 ಪಿಎಸ್ಐ, 25 ಸಿಪಿಐ, 8 ಮಂದಿ ಡಿವೈಎಸ್ಪಿ, 3 ಎಎಸ್ ಗಳನ್ನು ನಿಯೋಜಿಸಲಾಗಿದೆ.

ಇನ್ನು ಬಾಬರಿ ಮಸೀದಿ ದ್ವಂಸವಾಗಿ 25 ವರ್ಷವಾದ ಹಿನ್ನೆಲೆಯಲ್ಲಿ ಭಟ್ಕಳದಲ್ಲಿ ಪಿ.ಎಪ್.ಐ ಸಂಘಟನೆಯಿಂದ ಕರಾಳ ದಿನ ಆಚರಿಸುವ ಸಾಧ್ಯತೆ ಇದ್ದು, ಪೊಲೀಸ್ ಇಲಾಖೆ ಭಾರೀ ಬಿಗಿ ಭದ್ರತೆಯೊಂದಿಗೆ ತೀವ್ರ ಕಟ್ಟೆಚ್ಚರ ವಹಿಸಿದೆ. ಅಲ್ಲದೇ ಯಾವುದೇ ಮೆರವಣಿಗೆ ನೆಡೆಸದಂತೆ ಜಿಲ್ಲಾಡಳಿದ ನಿಷೇಧ ಹೇರಿದೆ. ಮನವಿ ಪತ್ರ ಮಾತ್ರ ನೀಡುವಂತೆ ಸೂಚಿಸಿರುವುದಾಗಿ, ಜಿಲ್ಲಾ ರಕ್ಷಣಾಧಿಕಾರಿ ವಿನಾಯಕ್ ಪಾಟೀಲ್ ಮಾಹಿತಿ ನೀಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ