ಉಡುಪಿ ಕೃಷ್ಣಮಠದಲ್ಲಿ ರವಿಶಂಕರ್ ಗುರೂಜಿ

Ravi shankar in udupi krishna mutt

06-12-2017 205

ಉಡುಪಿ: ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ ಉಡುಪಿಯ ಕೃಷ್ಣಮಠಕ್ಕೆ ಆಗಮಿಸಿದ್ದು, ಮಠದಲ್ಲಿ ಪೇಜಾವರ ಶ್ರೀಗಳನ್ನು ಭೇಟಿ ಮಾಡಿದ್ದಾರೆ. ರವಿಶಂಕರ್ ಗುರೂಜಿ ಅವರು, ಧರ್ಮ ಸಂಸತ್ತಿಗೆ ಹಾಜರಾಗಿರಲಿಲ್ಲ. ಇನ್ನು ಇಂದಿನ ಭೇಟಿಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಅರ್ಧತಾಸು ಮಾತುಕತೆ ನಡೆಸಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ರವಿಶಂಕರ್ ಗುರೂಜಿ ಮಧ್ಯಸ್ಥಿಕೆಗೆ ಧರ್ಮ ಸಂಸತ್ತಿನಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಪೇಜಾವರ ಶ್ರೀಗಳ ಮಾತಕತೆ ಮಹತ್ವ ಪಡೆದುಕೊಂಡಿತ್ತು. ಇನ್ನು ಧರ್ಮ ಸಂಸತ್ತಿನ ಆಕ್ಷೇಪಕ್ಕೆ ಲೋಕೋ ಭಿನ್ನರುಚಿ ಎಂದು ಗುರೂಜಿ ಹೇಳಿದ್ದಾರೆ. ಅಲ್ಲದೇ ಸೌಹಾರ್ದ ಪ್ರಯತ್ನ ಮುಂದುವರಿಸೋದಾಗಿಯೂ, ನಾನು ಭೇಟಿಯಾದವರೆಲ್ಲಾ ರಾಮಮಂದಿರದ ಪರವಾಗಿದ್ದಾರೆ, ಮುಸ್ಲೀಮರು ಸಹಮತ ವ್ಯಕ್ತಪಡಿಸಿದ್ದಾರೆ ಎಂದರು. ಆರ್.ಎಸ್.ಎಸ್. ತಮ್ಮದೇ ಅಭಿಪ್ರಾಯ ಹೊಂದಲು ಸ್ವತಂತ್ರರು, ರಾಮ ಮಂದಿರ ವಿಚಾರದಲ್ಲಿ ಎಲ್ಲರೂ ಸೌಹಾರ್ದ ಪ್ರಿಯರು ಎಂದಿದ್ದಾರೆ.ಸಂಬಂಧಿತ ಟ್ಯಾಗ್ಗಳು

Sri Ravi Shanka Art of Living ಪೇಜಾವರ ಶ್ರೀ ಕೃಷ್ಣಮಠ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ