‘ಕಾಂಗ್ರೆಸ್ ಅಂಬೇಡ್ಕರ್ ರಿಗೆ ಅಡ್ಡಗಾಲು ಹಾಕಿತ್ತು’06-12-2017

ಬೆಂಗಳೂರು: ದಾದಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರು ಪರಿನಿರ್ವಾಣ ದಿನವಾದ ಇಂದು, ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕೇಂದ್ರ ಸಚಿವ ಅನಂತ್ ಕುಮಾರ್, ಸಂಸದೆ ಶೋಭಾ ಕರಂದ್ಲಾಜೆ, ಎಂ.ಎಲ್.ಸಿ ರಾಮಚಂದ್ರೇಗೌಡ, ಎಂ.ಎಲ್.ಸಿ ಡಿ.ಎಸ್ ವೀರಯ್ಯ, ಬಿಜೆಪಿ ಮುಖಂಡ ಕೆ.ಶಿವರಾಂ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಅನಂತ್ ಕುಮಾರ್, ಸಂಸತ್ ಭವನದಿಂದ ಹಿಡಿದು ದೇಶಾದ್ಯಂತ ಅಂಬೇಡ್ಕರ್ ಅವರ 61ನೇ ಮಹಾಪರಿನಿರ್ವಾಣ ದಿನ ಆಚರಣೆ ಮಾಡಲಾಗ್ತಿದೆ. ಇಂದು ಬೆಳಿಗ್ಗೆ ದೆಹಲಿಯಿಂದ ಬರುವಾಗ ಅಂಬೇಡ್ಕರ್ ಅವರ ನುಡಿ ಬಹಳ ಇಷ್ಟ ಆಯ್ತು, ಇಡೀ ಜಗತ್ತು ಅಂಬೇಡ್ಕರ್ ಅವರಿಗೆ ಗೌರವ ಕೊಡುತ್ತಿದೆ. ಆದರೆ ಕಾಂಗ್ರೆಸ್ ಪಕ್ಷ ಮಾತ್ರ ಇದುವರೆಗೆ ಗೌರವ ನೀಡುವ ಕೆಲಸ ಮಾಡಿಲ್ಲ ಎಂದು ಆರೋಪಿಸಿದರು. ದೇಶಕ್ಕೆ ಸಂಸದೀಯ ಪ್ರಜಾಪ್ರಭುತ್ವ ಕೊಟ್ಟ ನಾಯಕ ಅಂಬೇಡ್ಕರ್. ಆದರೆ ಅಂಬೇಡ್ಕರ್ ಅವರನ್ನೇ ಸಂಸತ್ತಿಗೆ ಬರಲು ಅಡ್ಡಗಾಲು ಹಾಕಿದ ಪಕ್ಷ ಕಾಂಗ್ರೆಸ್, ಶ್ಯಾಂ ಪ್ರಸಾದ್ ಮುಖರ್ಜಿ ವಿನಂತಿ ಮೇರೆಗೆ ಅಂಬೇಡ್ಕರ್ ರಾಜ್ಯಸಭೆಗೆ ಬಂದರು ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿದರು.

ನಮ್ಮ ದೇಶದ ಮೊದಲ ಭಾರತ ರತ್ನ ಅಂಬೇಡ್ಕರ್ ಅವರಿಗೆ ನೀಡಬೇಕಿತ್ತು. ಆದರೆ ಕಾಂಗ್ರೆಸ್ ನ ದಲಿತ ವಿರೋಧಿ ನೀತಿಯಿಂದಾಗಿ ಅಂಬೇಡ್ಕರ್ ಅವರಿಗೆ ಭಾರತ ರತ್ನ  ಪ್ರಶಸ್ತಿ ಸಿಕ್ಕಿರಲಿಲ್ಲ, ಕೊನೆಗೆ 1989ರಲ್ಲಿ ಅಂಬೇಡ್ಕರ್ ಅವರಿಗೆ  ಭಾರತ ರತ್ನ ಪ್ರಶಸ್ತಿ ನೀಡಲಾಯಿತು ಎಂದರು. ನರೇಂದ್ರ ಮೋದಿ ಅವರು, ಪ್ರಧಾನಿ ಆದ ಮೇಲೆ ಅಂಬೇಡ್ಕರ್ ಜನಸಿದ ಭೂಮಿ, ಕರ್ಮಭೂಮಿ, ಮಹಾಪರಿನಿರ್ವಾಣವಾದ ಸ್ಥಳಗಳನ್ನು ಮಹಾ ತೀರ್ಥ ಸ್ಥಳಗಳನ್ನಾಗಿ-ಪವಿತ್ರ ಜಾಗಗಳನ್ನಾಗಿ ಅಭಿವೃದ್ಧಿಪಡಿಸಿದ್ದಾರೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ