ಯುವತಿಯರಿಗೆ ವಾಟ್ಸ್ಆ್ಯಪ್ ಕಿರುಕುಳ

PSI torturing girls in whatsapp

06-12-2017 362

ವಿಜಯಪುರ: ಪಾಸ್ ಪೋರ್ಟ್ ಗಾಗಿ ಪೊಲೀಸ್ ಠಾಣೆಗೆ ಬರುತ್ತಿದ್ದ ಯವತಿಯರ ನಂಬರ್ ಕದಿಯುತ್ತಿದ್ದ ಪಿಎಸ್ಐ ಒಬ್ಬರು, ಆವರಿಗೆ ವಾಟ್ಸ್ಆ್ಯಪ್ ಮೂಲಕ ಮೆಸೆಜ್ ಮಾಡಿ ಕಿರುಕುಳ ನೀಡುತ್ತಿರುವ, ಪ್ರಕರಣ ಬೆಳಕಿಗೆ ಬಂದಿದೆ. ವಿಜಯಪುರ ಜಿಲ್ಲೆಯ ಬನಹಟ್ಟಿ, ಪೊಲೀಸ್ ಠಾಣೆಯ ಪ್ರಕಾಶ್ ರಾಠೋಡ ಈ ರೀತಿ ಯವತಿಯರಿಗೆ ಕಿರುಕುಳ ನೀಡುತ್ತಿರುವ ಪಿಎಸ್ಐ. ಈ ಕುರಿತಂತೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಬನಹಟ್ಟಿ ಯುವತಿ ಪಿಎಸ್ಐ ಮೇಲೆ ಆರೋಪಿಸಿದ್ದಾಳೆ. ಸದ್ಯ ಈತ ಇಂಡಿ ತಾಲ್ಲೂಕು ಹೊರ್ತಿ ಠಾಣೆಯ ಪಿಎಸ್ಐ ಆಗಿದ್ದಾರೆ. ಬನಹಟ್ಟಿ ಪೊಲೀಸ್ ಠಾಣೆ ಪಿಎಸ್ಐ ಆಗಿದ್ದಾಗ, ಯವತಿಯರಿಗೆ ಮೆಸೆಜ್ ಮಾಡುತ್ತಿದ್ದ. ಈ ವೇಳೆ, ಆರೋಪಿಸಿದ ಯುವತಿಯೂ ಕಿರುಕುಳಕ್ಕೊಳಗಾಗಿದ್ದಳು ಎಂದು ಹೇಳಿದ್ದಾರೆ. ಇದನ್ನು ವಿರೋಧಿಸಿದವರಿಗೆ ಗೂಂಡಾಗಳಿಂದ ಬೆದರಿಕೆಯನ್ನು ಹಾಕುತ್ತಿದ್ದ ಎನ್ನಲಾಗಿದೆ. ರಕ್ಷಣೆ ಮಾಡಬೇಕಾದ ಪೊಲೀಸರೇ ಈ ರೀತಿ ನಡೆದುಕೊಂಡರೆ ನ್ಯಾಯ ಸಿಗುವುದಾದರು ಎಲ್ಲಿ ಎಂದು ಯುವತಿ ಪ್ರಶ್ನಿಸಿದ್ದಾಳೆ ಮತ್ತು ಪಿಎಸ್ಐ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾಳೆ.ಸಂಬಂಧಿತ ಟ್ಯಾಗ್ಗಳು

Passport PSI ವಾಟ್ಸ್ಆ್ಯಪ್ ಮೆಸೆಜ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ