ಗೌರಿ ಹತ್ಯೆ: ವೆಪನ್ ಡೀಲರ್ ನ ವಿಚಾರಣೆ...?

Gauri murder: Weapon dealer inquiry..?

06-12-2017

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಎಸ್.ಐ.ಟಿ ತಂಡದಿಂದ ಶೀಘ್ರದಲ್ಲೇ ವೆಪನ್ ಡೀಲರ್ನ ವಿಚಾರಣೆ ನಡೆಸಲಿದೆ ಎಂದು ಹೇಳಲಾಗುತ್ತಿದೆ. ಚಿಕ್ಕಬಳ್ಳಾಪುರದ ತಾಹಿರ್ ಹುಸೇನ್ ಅಲಿಯಾಸ್ ಅನೂಪ್ ಗೌಡ, ಇತ್ತೀಚೆಗಷ್ಟೇ ಕಂಟ್ರಿ ಮೇಡ್ ಪಿಸ್ತೂಲ್ ಮಾರಾಟ ಮಾಡಲು ನಗರಕ್ಕೆ ಬಂದಿದ್ದು, ಈ ವೇಳೆ ಪರಪ್ಪನ ಅಗ್ರಹಾರದ ಲಾಡ್ಜ್ ಒಂದರಲ್ಲಿ  ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಈತನನ್ನು  ಬಂಧಿಸಿದ್ದರು. ಶಾರ್ಪ್ ಶೂಟರ್ ಆಗಿರುವ ತಾಹಿರ್ ಅಲಿಯಾಸ್ ಅನೂಪ್ ಗೌಡ, ಭೂಗತ ಪಾತಕಿ ರವಿ ಪೂಜಾರಿ ಗ್ಯಾಂಗ್ ನ ಸದಸ್ಯನೂ ಆಗಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ಡಿಸೆಂಬರ್ 16ರವರೆಗೆ ಸಿಸಿಬಿ‌ ಪೊಲೀಸರ ವಶದಲ್ಲಿರುವ ತಾಹಿರ್ ನನ್ನು, ಬಾಡಿ ವಾರೆಂಟ್ ಪಡೆದು, ಎಸ್ಐಟಿ ತಂಡ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ