ಕಣ್ಣಿಗೆ ಕಾರದಪುಡಿ ಎರಚಿ ದರೋಡೆ

Rs 24 lakh robbery in belagavi

06-12-2017 271

ಬೆಳಗಾವಿ: ಕಣ್ಣಿಗೆ ಕಾರದ ಪುಡಿ ಎರಚಿ 24 ಲಕ್ಷ ರೂಪಾಯಿ ದರೋಡೆ ಮಾಡಿರುವ ಘಟನೆಯು ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ನಗರದ ಸಾಗರ್ ಹೊಟಲ್ ಬಳಿ ನಿನ್ನೆ ತಡರಾತ್ರಿ 11 ಗಂಟೆಗೆ ಈ ದುರ್ಘಟನೆ ನಡೆದಿದೆ. ತುಮಕೂರು ಮೂಲದ ನಾರಾಯಣ ಮುದ್ದಪ್ಪ ಎಂಬ ವ್ಯಕ್ತಿಯ ಹಣವನ್ನು ಖದೀಮರು ದೋಚಿದ್ದಾರೆ. ಹೂವಿನ ವ್ಯಾಪಾರದ ಕಲೆಕ್ಷನ್ ಗಾಗಿ, ನಾರಾಯಣಪ್ಪ ಬೆಳಗಾವಿಗೆ ಬಂದಿದ್ದರು. ಹಣವನ್ನೆಲ್ಲ ಸಂಗ್ರಹಿಸಿಟ್ಟುಕೊಂಡು ಹೊರಡುವ ವೇಳೆ, ಖದೀಮರು ಚಾಕು ತೊರಿಸಿ, ಕಣ್ಣಿಗೆ ಕಾರದ ಪುಡಿ ಎರಚಿ, ಹಣದ ಬ್ಯಾಗನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಕೂಡಲೆ ನಾರಾಯಣ ಮುದ್ದಪ್ಪ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇನ್ನು ಪೊಲೀಸರು ಕಳ್ಳರಿಗಾಗಿ ಬಲೆ ಬೀಸಿದ್ದಾರೆ.ಸಂಬಂಧಿತ ಟ್ಯಾಗ್ಗಳು

Belagavi case ಕಾರದ ಪುಡಿ ಖದೀಮರು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ