‘ಅವಕಾಶ ಸಿಕ್ಕರೆ ಚುನಾವಣೆಯಲ್ಲಿ ಸ್ಪರ್ಧೆ’05-12-2017

ಕಲಬುರಗಿ: ಚುನಾವಣೆಯಲ್ಲಿ ನನ್ನ ಸ್ಪರ್ಧೆ ವಿಚಾರ ಕುಮಾರ ಸ್ವಾಮಿ ಅವರು ನಿರ್ಧಾರ ಮಾಡುತ್ತಾರೆಂದು, ಜೆಡಿಎಸ್ ನ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ. ಕಲಬುರಗಿಯಲ್ಲಿಂದು ಮಾತನಾಡಿದ ಅವರು, ಪಕ್ಷ ಸಂಘಟನೆ ಉದ್ದೇಶದಿಂದ ರಾಜ್ಯ ಪ್ರವಾಸ ಮಾಡುತ್ತಿರುವೆ, ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಪಕ್ಷ ಬಲಿಷ್ಠಗೊಳ್ಳುತ್ತಿದೆ ಎಂದ ಅವರು, ಈ ಭಾಗದ ಅಭಿವೃದ್ಧಿ ವಿಷಯಗಳು ಪಕ್ಷದ ಪ್ರಣಾಳಿಕೆ ಒಳಗೊಳ್ಳಲಿದೆ ಎಂದು ತಿಳಿಸಿದರು. ಇನ್ನು ಅವಕಾಶ ಬಂದರೆ ಸ್ಫರ್ಧೆ ಮಾಡುವೆ, ಇಲ್ಲದಿದ್ದರೆ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ ಎಂದರು.  ಅಲ್ಲದೇ ರಾಜ್ಯದಲ್ಲಿ ಕುಮಾರಣ್ಣ ನಿಶ್ಚಿತವಾಗಿ ಸಿಎಂ ಆಗ್ತಾರೆ ಎಂದು ನುಡಿದರು.


ಸಂಬಂಧಿತ ಟ್ಯಾಗ್ಗಳು

Prajwal Revanna DECC kalaburagi ರೇವಣ್ಣ ಕಾರ್ಯಕರ್ತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ