'ನನ್ನ ಮೇಲೆ ಒತ್ತಡ ಹಾಕಬೇಡಿ’05-12-2017

ಮಂಡ್ಯ: ತನ್ನ ಮದುವೆಗೆ ಹೆಚ್.ಡಿ ಕುಮಾರ ಸ್ವಾಮಿ ಬರಲೇಬೇಕೆಂದು, ಜೆಡಿಎಸ್ ಕಾರ್ಯಕರ್ತ ಉಪವಾಸ ಸತ್ಯಾಗ್ರಹ ನಡೆಸಿದ ವಿಚಾರಕ್ಕೆ ಸಂಬಂಧಿಸಿಂತೆ, ಜೆಡಿಸ್ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಪ್ರತಿಕ್ರಿಸಿದ್ದು, ಮಂಡ್ಯದ ಕೊಕ್ಕರೆ ಬೆಳ್ಳೂರು ಗ್ರಾಮದಲ್ಲಿಂದು ಮಾತನಾಡಿದ ಅವರು,  ಪಕ್ಷದ ನಿಷ್ಠಾವಂತ ಕಾರ್ಯಕರ್ತರು ತಮ್ಮ ಕುಟುಂಬದ ಕಾರ್ಯಕ್ರಮಕ್ಕೆ ಬರಬೇಕೆಂದು ಹಠ ಮಾಡ್ತಾರೆ, ಅವರ ಅಭಿಮಾನ, ಪ್ರೀತಿಗೆ ಬೆಲೆಕಟ್ಟಲು ಸಾಧ್ಯವಿಲ್ಲ ಎಂದು ಭಾವುಕರಾಗಿ ನುಡಿದಿದ್ದಾರೆ. ಅಭಿಮಾನಿಗಳಿಗೆ ನಾನು ಮನವಿ ಮಾಡ್ತೀನಿ, ನನ್ನ ಇಕ್ಕಟ್ಟಿನ ಪರಿಸ್ಥಿತಿಗಳು. ಒತ್ತಡದ ನಡುವೆ ಕಾರ್ಯಕ್ರಮಕ್ಕೆ ಬರಬೇಕೆಂದು ಹೇಳಿದರೆ, ನಾನು ಬೇರೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ, ಬೆಳಿಗ್ಗೆಯಿಂದ ಸಂಜೆಯವರೆಗೂ ಕಾರ್ಯಕ್ರಮಕ್ಕೆ ಹೋಗಬೇಕಾಗುತ್ತದೆ ಎಂದಿದ್ದಾರೆ. ಹಿಂದೊಮ್ಮೆ ದಿನಕ್ಕೆ 50 ಮದುವೆಗೆ ಹೋಗುತ್ತಿದ್ದೆ ಆದರೆ ಈಗ ಒತ್ತಡದ ನಡುವೆ ನನಗೆ ಕಷ್ಟವಾದ್ರೂ ಬಂದಿದ್ದೇನೆ, ಆದ್ದರಿಂದ ಅಭಿಮಾನಿಗಳು, ಕಾರ್ಯಕರ್ತರು ಒತ್ತಡ ಹಾಕಬೇಡಿ, ಎಂದು ಮನವಿ ಮಾಡಿದ್ದಾರೆ. ಅಲ್ಲದೇ ಯಾವುದಾದರೂ ಸಮಯ ಬಿಡುವಿದ್ದಾಗ ನಾನೇ ಮನೆಗಳಿಗೆ ಬಂದು ಶುಭ ಹಾರೈಸುತ್ತೇನೆ ಎಂದರು.

 


ಸಂಬಂಧಿತ ಟ್ಯಾಗ್ಗಳು

mandya kokkare bellur ಕಾರ್ಯಕ್ರಮ ಪರಿಸ್ಥಿತಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ