ಮತ್ತೊಂದು ಸತ್ಯಾಗ್ರಹಕ್ಕೆ ‘ಅಣ್ಣಾ’ ನಿರ್ಧಾರ

Anna Hazare announces protest

05-12-2017 409

ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಮತ್ತೊಮ್ಮೆ ಸತ್ಯಾಗ್ರಹ ಆರಂಭಿಸಲು ನಿರ್ಧರಿಸಿದ್ದಾರೆ. ಲೋಕ್‌ಪಾಲ್ ಮಸೂದೆ ಜಾರಿಗೆ ಆಗ್ರಹಿಸಿ 2018ರ ಮಾರ್ಚ್‌ 23ರಿಂದ ದೆಹಲಿಯಲ್ಲಿ ಸತ್ಯಾಗ್ರಹ ಆರಂಭಿಸುವುದಾಗಿ ಅಣ್ಣಾ ಹಜಾರೆ ತಿಳಿಸಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡೂ ಕೈಗಾರಿಕೋದ್ಯಮಿಗಳ ಪರವಾದ ಧೋರಣೆ ಹೊಂದಿದ್ದು, ಅವರಿಗೆ ರೈತರ ಸಮಸ್ಯೆಗಳ ಬಗ್ಗೆ ಕಾಳಜಿಯೇ ಇಲ್ಲ ಎಂದು ಅಣ್ಣಾ ಟೀಕಿಸಿದ್ದಾರೆ. ಕೃಷಿ ಉತ್ಪನ್ನಗಳಿಗೆ ಲಾಭದಾಯಕವಾಗುವಂಥ ಬೆಲೆ ನಿಗದಿಪಡಿಸಬೇಕು ಮತ್ತು ಶಕ್ತಿಶಾಲಿಯಾದ ಲೋಕ್‌ಪಾಲ್ ಮಸೂದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.  ಒಂದು ಕಡೆ ಭ್ರಷ್ಟಾಚಾರ ಮುಕ್ತ ಭಾರತದ ಬಗ್ಗೆ ಮಾತನಾಡುವ ಮೋದಿ ಸರ್ಕಾರ, ಮತ್ತೊಂದು ಕಡೆ ತಿದ್ದುಪಡಿಗಳ ಮೂಲಕ ಲೋಕ್‌ಪಾಲ್ ಕಾಯಿದೆಯನ್ನು ದುರ್ಬಲಗೊಳಿಸುತ್ತಿದೆ ಎಂದು ಅಣ್ಣಾ ಹಜಾರೆ ಆರೋಪಿಸಿದ್ದಾರೆ.ಸಂಬಂಧಿತ ಟ್ಯಾಗ್ಗಳು

Anna Hazare Lokpal Bill ಭ್ರಷ್ಟಾಚಾರ ಮಸೂದೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ