ಕಲಬೆರಕೆ ತುಪ್ಪ: 6 ಮಂದಿ ವಿರುದ್ಧ ಎಫ್.ಐ.ಆರ್

mash ghee: Fir against 6

05-12-2017

ಬೆಂಗಳೂರು: ಪರಿಶುದ್ಧ ನಂದಿನಿ ತುಪ್ಪವನ್ನು ಕಲಬೆರಕೆ ಮಾಡಿ ಅಕ್ರಮ ನಡೆಸಿರುವ ಕೃತ್ಯ ಬೆಳಕಿಗೆ ಬಂದಿದ್ದು, ಪ್ರಕರಣ ದಾಖಲಿಸಿರುವ ಕಾಡುಗೋಡಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಬೆಂಗಳೂರು ಸೇರಿ ರಾಜ್ಯಾದ್ಯಂತ ನಂದಿನಿ ಪಾರ್ಲರ್‍ ಗಳಿಗೆ ನಂದಿನಿ ಉತ್ಪನ್ನಗಳ ಸಗಟು ಮಾರಾಟ ಮಾರಾಟ ಮಾಡಲು ಮಾಗಡಿ ರಸ್ತೆಯ ಈಗಲ್ ಎಂಟರ್ ಪ್ರೈಸಸ್‍ಗೆ ಕರ್ನಾಟಕ ಹಾಲು ಒಕ್ಕೂಟ ಮಹಾಮಂಡಳಿಯಿಂದ ಗುತ್ತಿಗೆ ನೀಡಲಾಗಿದೆ.

ಈಗಲ್ ಎಂಟರ್ ಪ್ರೈಸಸ್‍ನಿಂದ ನಂದಿನಿ ಪರಿಶುದ್ಧ ತುಪ್ಪವನ್ನೇ ಕಲಬೆರಕೆ ಮಾಡಿ ಸರಬರಾಜು ಮಾಡಿ ಹಣಗಳಿಸುತ್ತಿರುವುದನ್ನು ಡೈರಿ ಸರ್ಕಲ್‍ನಲ್ಲಿರುವ  ನಂದಿನಿ ಪಾರ್ಲರ್ ಸಿಬ್ಬಂಧಿ ಅಜಯ್ ಪತ್ತೆ ಮಾಡಿದ್ದಾರೆ. ಕೂಡಲೇ ಅಜಯ್ ಕೆಎಂಎಫ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಕಲಬೆರಕೆ ಮಾಡಿದೆ ಎನ್ನಲಾದ ತುಪ್ಪವನ್ನು ಕೆಎಂಎಫ್‍ನ ಪ್ರಯೋಗಾಲಯದಲ್ಲಿ ಪರಿಶೀಲಿಸಿದಾಗ ಅಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಸುಮಾರು 7 ಬಾಕ್ಸ್ ಗಳಲ್ಲಿ ಅಸಲಿ ತುಪ್ಪವನ್ನು ಕಲಬೆರಕೆ ಮಾಡುತ್ತಿರುವುದು ಕಂಡುಬಂದ ತಕ್ಷಣ ಅವುಗಳನ್ನು ವಶಕ್ಕೆ ತೆಗೆದುಕೊಂಡ ಕೆಎಂಎಫ್ ಮಾರ್ಕೇಟಿಂಗ್ ಡೈರೆಕ್ಟರ್ ಕುಲಕರ್ಣಿ ಅವರು ಆಡುಗೋಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಬಳಿಕ ಕಾರ್ಯಾಚರಣೆ ನಡೆಸಿ ತುಪ್ಪ ತಯಾರಿಸಲು ಬಳಸುತ್ತಿದ್ದ ಸಾಮಾಗ್ರಿಗಳನ್ನು ವಶಕ್ಕೆ ಪಡೆದ ಪೊಲೀಸರು ಕುಲಕರ್ಣಿಯವರ ದೂರಿನ ಮೇರೆಗೆ ಈಗಲ್ ಎಂಟರ್ ಪ್ರೈಸಸ್ ನ ಪುಡರೀಕ್,ನೀರುಪಾ,ಶರೀಫ್ ,ನಾಗರಾಜ್ ,ಮರಿಸ್ವಾಮಿ ,ಸಂತೋಷ್ ಎಂಬುವವರ ವಿರುದ್ಧ ಎಫ್.ಐ.ಆರ್ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Nandini Milk KMF ಕೆಎಂಎಫ್ ನಂದಿನಿ ತುಪ್ಪ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ