ಮೋದಿಗೆ ಸಿದ್ದರಾಮಯ್ಯ ತಿರುಗೇಟು

Siddaramaiah

05-12-2017

ಹುಬ್ಬಳ್ಳಿ: ಎಐಸಿಸಿ‌ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಆಯ್ಕೆಯಾಗಬೇಕೆಂದು ಪಕ್ಷದ ಬಹುತೇಕರ ಬಯಕೆ ಎಂದು ಹುಬ್ಬಳ್ಳಿ ಏರ್ ಪೋರ್ಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಏರ್ ಪೋರ್ಟ್ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಬಹುಮತ ಇದ್ದವರಿಗೇ ಪಟ್ಟ ಕಟ್ಟೋದು, ಪ್ರಜಾಪ್ರಭುತ್ವದಡಿಯೇ ರಾಹುಲ್‌ ಗಾಂಧಿಗೆ ಪಟ್ಟ ಕಟ್ಟಲಾಗ್ತಿದೆ ಎಂದರು.

ಕಾಂಗ್ರೆಸ್ ಗೆ 132 ವರ್ಷದ ಇತಿಹಾಸವಿದೆ. ಗಾಂಧಿ ಕುಟುಂಬವಷ್ಟೇ ಅಲ್ಲ, ಬೇರೆಯವರೂ ಅಧ್ಯಕ್ಷರಾಗಿದ್ದಾರೆ, ರಾಹುಲ್ ಗಾಂಧಿ ಅಧ್ಯಕ್ಷರಾಗ್ತಿರೋದಕ್ಕೆ‌ ಟೀಕಿಸಿದ್ದಕ್ಕೆ ಪ್ರಧಾನಿ ಮೋದಿಗೆ‌ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ‌. ರಾಹುಲ್ ಗಾಂಧಿ ಅಧ್ಯಕ್ಷರಾಗ್ತಿರೋದಕ್ಕೆ ವಿಪಕ್ಷಗಳಿಂದ ಪ್ರಶಂಸೆ ಬಯಸೋಕಾಗುತ್ತಾ.? ಹಾಗಾಗಿ ವಿರೋಧ ಪಕ್ಷದ ನರೇಂದ್ರ ಮೋದಿ ಟೀಕೆ ಮಾಡಿದ್ದಾರೆ ಎಂದರು.

ಇನ್ನು ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾಗುವುದು ಖಚಿತ ಹಿನ್ನೆಲೆ, ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ ಮಾಡಿದ್ದಾರೆ. ಶಿರಸಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಿಹಿ ಹಂಚಿ ಸಂಭ್ರಮಿಸಿದರು. ಯುವ ಧುರೀಣ ರಾಹುಲ್ ಗಾಂಧಿಯವರನ್ನೇ ನಾಯಕರನ್ನಾಗಿ ಮಾಡಲು ಎಲ್ಲ ಮುಖಂಡರು ಒಪ್ಪಿಕೊಂಡಿದ್ದಾರೆ, ಇದೇ ಕಾರಣದಿಂದಾಗಿ ಅಧ್ಯಕ್ಷ ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸಿಲ್ಲ ಎಂದಿದ್ದಾರೆ. ಹಿಂದೆ ಅಧಿಕಾರವಿದ್ದಾಗಲೂ ಪಕ್ಷ ಸಂಘಟನೆಗೆ ದುಡಿದ ರಾಹುಲ್ ಗಾಂಧಿ, ಇನ್ಮುಂದೆಯೂ ದೇಶದಲ್ಲಿ ಉತ್ತಮ ಸಂಘಟನೆ ರೂಪಗೊಳ್ಳಲಿದೆ, ರಾಜ್ಯದಲ್ಲೂ ಕಾಂಗ್ರೆಸ್ ಒಗ್ಗಟ್ಟಿನಿಂದ ಇದೆ, ಮುಂಬರುವ ಚುನಾವಣೆಯಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆಯೆಂದು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಹೇಳಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

Rahul Gandhi AICC President ಅಧಿಕಾರ ಚುನಾವಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ