'ಬೇಕೇ ಬೇಕು ಶೌಚಾಲಯ ಬೇಕು’

women protest in front of purasabha

05-12-2017

ವಿಜಯಪುರ: ವಿಜಯಪುರ ಜಿಲ್ಲೆ ಸಿಂದಗಿ ಪುರಸಭೆಗೆ ಮಹಿಳೆಯ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ. ಬೇಕೇ ಬೇಕು ಶೌಚಾಲಯ ಬೇಕು ಎಂದು ಪಟ್ಟು ಹಿಡಿದ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ. ಹಲವು ವರ್ಷಗಳಿಂದ ಶೌಚಾಲಯ ನಿರ್ಮಾಣ ಮಾಡದೆ ಇರುವ ಅಧಿಕಾರಿಗಳು, ಶೌಚಾಲಯಕ್ಕೆಂದು ಅರ್ಜಿ ಸಲ್ಲಿಸಿದರು ಕ್ಯಾರೆ ಎನ್ನದ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಇಂದು ಅವರ ಸಹನೆಯ ಕಟ್ಟೆ ಒಡೆದಿದ್ದು, ಏಕಾಏಕಿ ಪುರಸಭೆ ಕಾರ್ಯಾಲಯಕ್ಕೆ ದಾವಿಸಿದ ಮಹಿಳೆಯರು, ಸಿಬ್ಬಂದಿಯನ್ನು ಕಚೇರಿಯಿಂದ ಹೊರಹಾಕಿ, ಬೀಗ ಜಡಿದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಈ ವೇಳೆ ಸರ್ಕಾರದಿಂದ ಬಂದ ಅನುದಾನವವೆಲ್ಲ ಎಲ್ಲಿ ಹೋಗುತ್ತದೆಂದು ಪ್ರಶ್ನಿಸಿದ್ದಾರೆ. ಪ್ರತಿಭಟನಾ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಮನವೊಲಿಸಲು ಯತ್ನಿಸಿದ್ದು, ಯಾವುದಕ್ಕೂ ಜಗ್ಗದ ಮಹಿಳೆಯರು ಪ್ರತಿಭಟನೆ ಮುಂದುವರೆಸಿದ್ದಾರೆ.

 

 

 

 

 


ಸಂಬಂಧಿತ ಟ್ಯಾಗ್ಗಳು

purasabha womens protest ವಿಜಯಪುರ ಶೌಚಾಲಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ