ಕುಡಿದು ಅಡ್ಡಾದಿಡ್ಡಿ ಬೈಕ್‍ ಚಾಲನೆ

Drunken driving and accident

05-12-2017

ಬೆಂಗಳೂರು: ಹೆಬ್ಬಾಳದ ಬಳಿ ನಿನ್ನೆ ರಾತ್ರಿ ಕಂಠ ಪೂರ್ತಿ ಕುಡಿದಿದ್ದ ಮೂವರು ಒಂದೇ ಬೈಕ್‍ನಲ್ಲಿ ಹೋಗುತ್ತಾ ಅಡ್ಡಾದಿಡ್ಡಿ ಚಲಿಸಿ ಮುಂದೆ ಹೋಗುತ್ತಿದ್ದ ಕ್ಯಾಂಟರ್ ಗೆ ಡಿಕ್ಕಿ ಹೊಡೆದು, ಕೆಳಗೆಬಿದ್ದು ಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಸಂತೋಷ್‍ನನ್ನು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ. ಉಳಿದಿಬ್ಬರೂ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದು ಅಪಘಾತಗೊಂಡಿರುವ ಬುಲೆಟ್ ಬೈಕ್ ಜಖಂಗೊಂಡಿದೆ.

ಮಿತಿಮೀರಿ ಮದ್ಯಪಾನ ಮಾಡಿದ ಸಂತೋಷ್ ಸೇರಿ ಮೂವರು ರಾತ್ರಿ 11.30ರ ವೇಳೆ ಬೈಕ್‍ನಲ್ಲಿ ಮೇಕ್ರಿ ಸರ್ಕಲ್ ಕಡೆಯಿಂದ ಏರ್ ಪೋರ್ಟ್ ರಸ್ತೆ ಕಡೆ ಹೋಗುತ್ತಿದ್ದಾಗ ಮುಂದೆ ಹೋಗುತ್ತಿದ್ದ ಕ್ಯಾಂಟರ್ ಚಾಲಕನಿಗೆ ಚಮಕ್ ಕೊಡಲು ಹೋಗಿ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದ್ದಾರೆ.

ಡಿಕ್ಕಿಯ ರಭಸಕ್ಕೆ ಇಬ್ಬರು ನಡು ರಸ್ತೆಯಲ್ಲೇ ಕೆಳಗೆ ಬಿದ್ದಿರೆ, ಬೈಕ್ ಓಡಿಸುತ್ತಿದ್ದ ಸಂತೋಷ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದಾನೆ. ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಸಂತೋಷ್ ಸೇರಿ ಮೂವರನ್ನು ಸಾರ್ವಜನಿಕರು  ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸುದ್ದಿ ತಿಳಿಯುತ್ತಿದಂತೆಯೇ ಸ್ಥಳಕ್ಕೆ ದೌಡಾಯಿಸಿದ ಆರ್.ಟಿ.ನಗರ ಸಂಚಾರ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Bike Accident Road accident ಏರ್ ಪೋರ್ಟ್ ಕ್ಯಾಂಟರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ