ಹೆತ್ತ ಮಗನನ್ನೇ ಕೊಂದ ತಂದೆ

cold blooded father killed his son

05-12-2017

ಬೆಳಗಾವಿ: ವರದಕ್ಷಿಣೆಗಾಗಿ ಒಂದು ವರ್ಷದ ಹಸುಗೂಸನ್ನು ಕೊಂದಿರುವ ಹೃದಯ ವಿದ್ರಾವಕ ಘಟನೆಯು ಬೆಳಗಾವಿಯ ಚಿಕ್ಕೋಡಿಯಲ್ಲಿ ನಡೆದಿದೆ. 'ಜೋಯೆಲ್ ನಾಮದೇವ ನಡುವಿನಕೇರಿ'  ಮೃತ ಮಗು. ಮಗುವಿನ ತಂದೆ ಹಾಗೂ ಅಜ್ಜಿ ಪುಟ್ಟ ಕಂದಮ್ಮನನ್ನು ಕೊಲೆ ಮಾಡಿರುವುದಾಗಿ ಮೃತ ಕೂಸಿನ ತಾಯಿ ಆರೋಪಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಕೊಟಬಾಗಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ವರದಕ್ಷಿಣೆ ಕಿರುಕುಳದ ಹಿನ್ನೆಲೆಯಲ್ಲಿ, ಕಳೆದ ಒಂದು ವರ್ಷದಿಂದ ದಾಂಡೇಲಿಯ ತಾಯಿಯ ಮನೆಯಲ್ಲಿದ್ದ ಕಂದಮ್ಮನ ತಾಯಿ, ಕಳೆದ 10 ದಿನಗಳ ಹಿಂದಷ್ಟೇ ಗಂಡನ ಮನೆಗೆ ಹಸಗೂಸನ್ನು ಕರೆದುಕೊಂಡು, ಕೊಟಬಾಗಿ ಗ್ರಾಮಕ್ಕೆ ಬಂದಿದ್ದರು. ಈ ವೇಳೆ, ತಾಯಿಯನ್ನು ಮನೆಯಿಂದ ಹೊರಗಡೆ ತಳ್ಳಿ, ಔಷದ ಸಿಂಪಡಿಸಿ ಕೊಲೆಮಾಡಿದ್ದಾರೆ ಎಂದು ಮಗುವಿನ ತಾಯಿ  ಆರೋಪಿಸಿದ್ದಾರೆ. ಅಲ್ಲದೇ ಈ ಕುರಿತು ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Belagavi Chikodi ವರದಕ್ಷಿಣೆ ಹುಕ್ಕೇರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ