‘ದೇಶದಲ್ಲಿ ರಾಜಕೀಯ ಪಕ್ಷಗಳ ಅಗತ್ಯವಿಲ್ಲ’05-12-2017

ಮಂಗಳೂರು: ಸತ್ಯವಾಗಿ ಇರಬೇಕಾದರೆ ಯಾವ ಧರ್ಮ ಬೇಕಾಗಿಲ್ಲ, ಜಾತಿ ಧರ್ಮ ಮನೆಯಲ್ಲಿ ಇರಬೇಕು ರಸ್ತೆಗೆ ಬರಬಾರದು ಎಂದು ಕೆ.ಪಿ.ಜಿ.ಪಿ ಪಕ್ಷದ ಸ್ಥಾಪಕ ಹಾಗು ನಟ ಉಪೇಂದ್ರ ಹೇಳಿದ್ದಾರೆ. ಮಂಗಳೂರಿನಲ್ಲಿಂದು ಮಾತನಾಡಿದ ಅವರು, ಜನರ ಸಾಮಾನ್ಯ ಸಮಸ್ಯೆಗಳ  ಬಗ್ಗೆ ನಾವು ಮಾತನಾಡಬೇಕು, ಡಿವೈಡ್ ಆಂಡ್ ರೂಲ್‌ ಬದಲಾಗಿ ಒಗ್ಗೂಡಿ ಬದುಕಬೇಕು, ಶಿಕ್ಷಣ ಹಾಗೂ ವೈದ್ಯಕೀಯ ‌ಸೌಲಭ್ಯ ಉತ್ತಮವಾಗಿದ್ದರೆ ಭ್ರಷ್ಟಾಚಾರ ಇರೋದಿಲ್ಲ ಎಂದರು.

ಹಣಕೊಟ್ಟು ಜೈಕಾರ ಹಾಕಿಸಿಕೊಳ್ಳಲ್ಲ, ದೇಶದಲ್ಲಿ ರಾಜಕೀಯ ಪಕ್ಷಗಳ ಅಗತ್ಯ ಇಲ್ಲ, ಪಕ್ಷ ಇಲ್ಲದೆ ದೇಶ ನಡೆಸಬೇಕು ಎಂದ ಅವರು, ಬೇರೆ ಪಕ್ಷಗಳ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವ ಯೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪಕ್ಷಕ್ಕೆ ಯಾರ ಡೊನೇಷನ್ ಕೂಡಾ ಸ್ವೀಕಾರ ಮಾಡಲ್ಲ, ಸರ್ಕಾರಿ ನೌಕರರೆಲ್ಲಾ ಖಾಕಿ ಡ್ರೆಸ್ ತೊಡ್ಕೊಬೇಡು, ದೇಶದಲ್ಲಿ ಒಂದೇ ಬಾರಿ‌ ಚುನಾವಣೆ ಮಾಡೋ ಪ್ರಧಾನಿ ಮೋದಿ ಯೋಚನೆ ಸರಿಯಲ್ಲ ಎಂದು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

KPJP Upendra ಧರ್ಮ ಜಾತಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ