‘ಬಚಾವ್ ಆಗಲು ಬಿಎಸ್ ವೈ ಬಿಜೆಪಿ ಸೇರಿದ್ದಾರೆ’

yeddurappa v/s B.R patil

05-12-2017

ಕಲಬುರಗಿ: ಮಾಜಿ ಸಿಎಂ ಬಿಎಸ್ ವೈ ವಿರುದ್ಧ ಶಾಸಕ ಬಿ.ಆರ್.ಪಾಟೀಲ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೆಜೆಪಿಯಿಂದ ಆರಿಸಿ ಬಂದ ಆಳಂದ ಶಾಸಕ ಬಿ.ಆರ್.ಪಾಟೀಲ, ಸದ್ಯ ಕಾಂಗ್ರೆಸ್ ನಲ್ಲಿದ್ದಾರೆ. ನಿನ್ನೆ ನಡೆದ ಬಿಜೆಪಿಯ ಪರಿವರ್ತನಾ ಯಾತ್ರೆಯಲ್ಲಿ  ಬಿ.ಎಸ್.ವೈ ಅವರು, ಬಿ.ಆರ್.ಪಾಟೀಲ ವಿರುದ್ಧ ಹರಿಹಾಯ್ದಿದ್ದರು. ಈ ಕುರಿತು ಇಂದು ಮಾತನಾಡಿದ ಬಿ.ಆರ್.ಪಾಟೀಲ್, ಬಿ.ಎಸ್.ಯಡಿಯೂರಪ್ಪ ಒಬ್ಬ ದೊಡ್ಡ ಮೋಸಗಾರ, ನಾನಲ್ಲ ನಂಬಿಕೆ ದ್ರೋಹಿ ಬಿಎಸ್ ವೈ ನಂಬಿಕೆ ದ್ರೋಹಿ ಎಂದು ತಿರುಗೇಟು ನೀಡಿದ್ದಾರೆ.

ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ ಅವರು, ಶಿವಮೊಗ್ಗದಲ್ಲಿ ಕೆಜೆಪಿಯಿಂದ ಎಷ್ಟು ಜನ ಗೆದ್ದರು, ರಾಜ್ಯದಲ್ಲಿ ಕೆಜೆಪಿ ಸರಕಾರ ಏಕೆ ರಚನೆಯಾಗಲಿಲ್ಲ, ಇದಕ್ಕೆ ಬಿ.ಎಸ್.ವೈ ಉತ್ತರ ನೀಡಬೇಕು ಎಂದರು. ಅಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಆಳಂದ ಜನ ನನ್ನನ್ನು ಆಯ್ಕೆಮಾಡಿದ್ದಾರೆ. ರಕ್ತದಿಂದ ಬರೆದುಕೊಡುತ್ತೇನೆ ನಾನು ಪುನಃ ಬಿಜೆಪಿಗೆ ಹೋಗೋದಿಲ್ಲ ಎಂದಿದ್ದ ಬಿ.ಎಸ್.ವೈ, ಅವರ ಮೇಲೆ ಸಾಕಷ್ಟು ಕೇಸ್ಗಳಿದ್ದು ಅವುಗಳಿಂದ ಬಚಾವ್ ಆಗಲು ಪುನಃ ಬಿಜೆಪಿ ಸೇರಿದ್ದಾರೆ ಎಂದು ಬಿ.ಆರ್.ಪಾಟೀಲ್ ನೇರವಾಗಿ ಆರೋಪಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

B.R patil BSY ತಿರುಗೇಟು ವಾಗ್ದಾಳಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ